ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದೇನು?

Last Updated 26 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಸ್ಥಳ–ವೆಂಕಟೇಶ್ವರ ಕಲ್ಯಾಣ ಮಂಟಪ ಹೊಸಪೇಟೆ. ಬೆಳಿಗ್ಗೆ 8ಕ್ಕೆ. ರಾಷ್ಟ್ರಧ್ವಜಾರೋಹಣ–ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ. ನಾಡ ಧ್ವಜಾರೋಹಣ–ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ. ಪರಿಷತ್ತಿನ ಧ್ವಜಾರೋಹಣ–ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್‌.

ಬೆಳಿಗ್ಗೆ 9.30: ಸ್ಥಳ: ವಡಕರಾಯ ದೇವಸ್ಥಾನ, ಮೇನ್‌ ಬಜಾರ್‌. ಜಾನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಮತ್ತು ಸಮ್ಮೇಳನದ ಅಧ್ಯಕ್ಷ ರಂಗೋಪಂತ ನಾಗರಾಜರಾಯರ ಮೆರವಣಿಗೆ. ಚಾಲನೆ–ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌.

ಬೆಳಿಗ್ಗೆ 11: ಸಮ್ಮೇಳನದ ಉದ್ಘಾಟನೆ–ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ. ಸಾನ್ನಿಧ್ಯ–ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ. ಆಶಯ ನುಡಿ–ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ. ಮುಖ್ಯ ಭಾಷಣ–ಸಾಹಿತಿ ಮೃತ್ಯುಂಜಯ ರುಮಾಲೆ. ಅಧ್ಯಕ್ಷತೆ–ಶಾಸಕ ಆನಂದ್‌ ಸಿಂಗ್‌. ದಯಾನಂದ ಕಿನ್ನಾಳ್‌ ಅವರ ಬಾಳಬುತ್ತಿ ಚುಟುಕು ಪುಸ್ತಕ ಬಿಡುಗಡೆ–ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು.

ಮಧ್ಯಾಹ್ನ 12: ಗೋಷ್ಠಿ–1. ‘ಹೊಸಪೇಟೆ ತಾಲ್ಲೂಕಿನ ಸಾಹಿತ್ಯ ಹಾಗೂ ಸಂಸ್ಕೃತಿ’ – ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ. ‘ಹೊಸಪೇಟೆಯ ಚರಿತ್ರೆ ಅವಲೋಕನ ಮತ್ತು ಪ್ರವಾಸೋದ್ಯಮ ಸಾಧ್ಯತೆಗಳು’ –ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಟಿ.ಎಚ್‌.ಎಂ. ಚಂದ್ರಶೇಖರ ಶಾಸ್ತ್ರಿ. ಆಶಯ ನುಡಿ–ಶಿಕ್ಷಕಿ ಎಸ್‌.ಎಂ. ಸಾವಿತ್ರಿ. ಅಧ್ಯಕ್ಷತೆ–ಸಾಹಿತಿ ಪ್ರೊ.ಯು. ರಾಘವೇಂದ್ರರಾವ.

ಮಧ್ಯಾಹ್ನ 2:ಗೋಷ್ಠಿ–2. ‘ಹೊಸಪೇಟೆ ತಾಲ್ಲೂಕಿನ ಕೃಷಿ ಮತ್ತು ನೀರಾವರಿ ವರ್ತಮಾನದ ಸಂಕಷ್ಟಗಳು’–ಹಿರಿಯ ರೈತ ಮುಖಂಡ ಜೆ.ಎಂ. ವೀರಸಂಗಯ್ಯ. ‘ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು’–ಸಮುದಾಯ ಸಾಂಸ್ಕೃತಿಕ ಸಮಿತಿ ಸಂಚಾಲಕ ಎ. ಕರುಣಾನಿಧಿ. ಆಶಯ ನುಡಿ–ಪಿ. ದಿವಾಕರ ನಾರಾಯಣ. ಅಧ್ಯಕ್ಷತೆ–ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಜಿ.ಕೆ. ಹನುಮಂತಪ್ಪ.

ಮಧ್ಯಾಹ್ನ 3.30: ಕವಿಗೋಷ್ಠಿ. ಆಶಯ ನುಡಿ–ಕವಯತ್ರಿ ಟಿ.ಎಂ. ಉಷಾರಾಣಿ. ಅಧ್ಯಕ್ಷತೆ–ಎಚ್‌. ಬಾಲರಾಜ.
ಸಂಜೆ 5.30. ಸಮಾರೋಪ ಹಾಗೂ ಸನ್ಮಾನ ಸಮಾರಂಭ. ಅಧ್ಯಕ್ಷತೆ–ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ. ಸಾನ್ನಿಧ್ಯ–ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ. ಸಮಾರೋಪ ಭಾಷಣ–ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಕೆ. ರವೀಂದ್ರನಾಥ.

ಸಂಜೆ 7: ಸಾಂಸ್ಕೃತಿಕ ಕಾರ್ಯಕ್ರಮಗಳು. ಸಮೂಹ ನೃತ್ಯ, ಸಮಕಾಲೀನ ನೃತ್ಯ, ಗೀತ ಗಾಯನ, ಭರತನಾಟ್ಯ, ಜನಪದ ನೃತ್ಯ, ಗಾಯನ, ಮಿಮಿಕ್ರಿ, ಜನಪದ ಗಾಯನ, ಸುಗಮ ಸಂಗೀತ, ಗೀತ ಗಾಯನ, ಸಂಗೀತ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT