ಕರಿಮಾರೆಮ್ಮ ಜಾತ್ರೆಗೆ ನೂರಾರು ಭಕ್ತರು

7

ಕರಿಮಾರೆಮ್ಮ ಜಾತ್ರೆಗೆ ನೂರಾರು ಭಕ್ತರು

Published:
Updated:
Deccan Herald

ಬಳ್ಳಾರಿ: ನಗರದ ಹೊರವಲಯದಲ್ಲಿರುವ ಕರಿಮಾರೆಮ್ಮ ಗುಡ್ಡದ ಮೇಲೆ ಮಂಗಳವಾರ ನಡೆದ ಕರಿಮಾರೆಮ್ಮ ಜಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ತುಂತುರು ಮಳೆಯ ನಡುವೆಯೇ ಜಾತ್ರೆಯ ಅಂಗವಾಗಿ ಬೆಳಿಗ್ಗೆ ನಡೆದ ದೇವಿಯ ಉತ್ಸವಮೂರ್ತಿಯ ಮೆರವಣಿಗೆಯಲ್ಲಿ  ಸುತ್ತಮುತ್ತಲ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನದ ಧರ್ಮಕರ್ತ ಸಿ.ಸಿ.ಗೋವಿಂದಸ್ವಾಮಿ ಸಂಜೆ ಅಗ್ನಿಕುಂಡವನ್ನು ಬರಿಗಾಲಿನಲ್ಲಿ ಹಾದು ಹರಕೆ ತೀರಿಸಿದರು. ನಂತರ ಅಗ್ನಿಕುಂಡಕ್ಕೆ ಕೈಮುಗಿದು ಭಕ್ತರು ಬೂದಿಯನ್ನು ಹಣೆಗೆ ತಿಲಕದಂತೆ ಹಚ್ಚಿಕೊಂಡರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !