ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ

Last Updated 16 ಆಗಸ್ಟ್ 2020, 7:40 IST
ಅಕ್ಷರ ಗಾತ್ರ
ADVERTISEMENT
""
""

ಹೊಸಪೇಟೆ: ಬಳ್ಳಾರಿ ಜಿಲ್ಲೆಯಾದ್ಯಂತ ಭಾನುವಾರ ಜಿಟಿಜಿಟಿ ಮಳೆಯಾಗುತ್ತಿದೆ.

ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಸಿರುಗುಪ್ಪ, ಸಂಡೂರು ತಾಲ್ಲೂಕು, ಕಾನಹೊಸಹಳ್ಳಿ, ಮರಿಯಮ್ಮನಹಳ್ಳಿ ಹೋಬಳಿಯಲ್ಲೂ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಹೊಸಪೇಟೆಯಲ್ಲಿ ತಡರಾತ್ರಿ ಆರಂಭಗೊಂಡ ಜಿಟಿಜಿಟಿ ಮಳೆ, ನಸುಕಿನ ಜಾವ ಕೆಲಹೊತ್ತು ವಿರಮಿಸಿ, ಮತ್ತೆ ಪ್ರಾರಂಭಗೊಂಡಿದ್ದು, ಸತತವಾಗಿ ಸುರಿಯುತ್ತಿದೆ. ಭಾನುವಾರ ರಜಾ ದಿನವಾಗಿದ್ದರೂ ಮಳೆಯಿಂದಾಗಿ ಜನ ಮನೆಗಳಿಂದ ಹೊರಬಂದಿಲ್ಲ. ಬಹುತೇಕ ರಸ್ತೆಗಳು ನಿರ್ಜನಗೊಂಡಿವೆ. ಶನಿವಾರವೂ ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿದಿತ್ತು. ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ವಾತಾವರಣ ಸಂಪೂರ್ಣ ತಂಪಾಗಿದೆ. ಗಣಿಗಾರಿಕೆಯಿಂದ ಕೆಂಪಾಗಿದ್ದ ಗುಡ್ಡಗಳೆಲ್ಲ ಹಸಿರು ಹೊದ್ದಿಕೊಂಡಿವೆ.

ಜಿಟಿಜಿಟಿ ಮಳೆಗೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಹೋಬಳಿಯ ರಸ್ತೆ ಕೊಚ್ಚೆಯಾಗಿ ಮಾರ್ಪಟ್ಟಿರುವುದು

ಹೊಸಪೇಟೆ ತಾಲ್ಲೂಕಿನ ಹಂಪಿ, ಕಮಲಾಪುರ, ನಾಗೇನಗಳ್ಳಿ, ಧರ್ಮಸಾಗರ, ಚಿನ್ನಾಪುರ, ನಲ್ಲಾಪುರ, ವಡ್ಡರಹಳ್ಳಿ, ಸಂಕ್ಲಾಪುರ, ಬಸವನದುರ್ಗ, ಹೊಸೂರು, ಮರಿಯಮ್ಮನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯ ಗದ್ದಿಕೆರೆ ದಂಡೆಯ ಪಟ್ಟಿಹಾಳ ರಸ್ತೆಯಲ್ಲಿ ಕಳೆದ ಬಾರಿಯಂತೆ ಮತ್ತೆ ಕುಸಿತ ಉಂಟಾಗಿದೆ

ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಸಿರುಗುಪ್ಪ, ಸಂಡೂರು, ಕಂಪ್ಲಿಯಲ್ಲಿ ಭಾನುವಾರ ನಸುಕಿನ ಜಾವ ಆರಂಭಗೊಂಡ ಜಿಟಿಜಿಟಿ ಮಳೆ ಈಗಲೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT