ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವ್ಯಗೊಂಚಲು’ ಪುಸ್ತಕ ಬಿಡುಗಡೆಗೊಳಿದ ಸಾಹಿತಿ ಕುಂ.ವೀರಭದ್ರಪ್ಪ

Last Updated 15 ನವೆಂಬರ್ 2021, 11:47 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಸಾಹಿತ್ಯ ಕೃತಿಗಳು ಕವಿಗಳಿಗೆ ಸಾಂತ್ವನ ಕೇಂದ್ರವಿದ್ದಂತೆ. ಜೀವನದಲ್ಲಿ ಬರುವ ಕಷ್ಟಗಳನ್ನು ಸಾಹಿತ್ಯ ರಚನೆ ಮೂಲಕ ಸಮಾಧಾನ ಹೊಂದಬಹುದು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕವಯತ್ರಿ ನೂರ್ ಜಹಾನ್ ರಚಿಸಿದ 'ಕಾವ್ಯಗೊಂಚಲು' ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಏನಾದರೂ ಬರಿ ತಮ್ಮ ಸುಮ್ಮನಿರದೆ ಎಂಬಂತೆ ಸಾಹಿತ್ಯವನ್ನು ಬರೆಯುತ್ತಾ ಹೊರಟವರಿಗೆ ಸಾಮಾಜಿಕ ಓರೆ ಕೊರೆ ತಿದ್ದುವ ಜೊತೆಗೆ ಸಮಾಜವನ್ನು ಅರ್ಥೈಸಿಕೊಳ್ಳುವ ಬದ್ಧತೆ ಬರುತ್ತದೆ’ ಎಂದರು.

‘ಮಾತೃ ಭಾಷಯೆಲ್ಲಿ ಸಾಹಿತ್ಯ ಬರೆದು ಪ್ರಸಿದ್ಧರಾದವರು ಹೆಚ್ಚು. ಕನ್ನಡದಲ್ಲಿ ಹೆಚ್ಚಿನ ಪುಸ್ತಕಗಳು ಬರೆಯುವ ಮೂಲಕ ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಜೀವನದಲ್ಲಿ ಎದುರಾಗುವ ಸಂಕಷ್ಟಗಳ ನಡುವೆ ಸಾಹಿತ್ಯ ಬರೆಯುವುದರಿಂದ ಸುಖವಾಗಿರಬಹುದು. ಧರ್ಮಗಳನ್ನು ಅನುಮಾನದಿಂದ ನೋಡುವಂತಹ ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕನ್ನಡದಲ್ಲಿ ಪುಸ್ತಕ ಹೊರತಂದಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ವೈದ್ಯಾಧಿಕಾರಿ ಡಾ.ಸುಲೋಚನಾ, ‘ಸಾಹಿತ್ಯ ಸೃಷ್ಟಿ ಮಗು ಜನನವಿದ್ದಂತೆ. ಮಗು ಭ್ರೂಣಾವಸ್ಥೆಯಲ್ಲಿ ಇರುವಂತೆ ಸಾಹಿತಿಗೆ ಕಾವ್ಯ ಮೂಡಬೇಕು. ಒಮ್ಮೆ ಬರೆದ ನಂತರ ಹಲವು ತಿದ್ದುತ್ತಲೆ ಇರಬೇಕು . ಆಗ 9 ತಿಂಗಳಲ್ಲಿ ಮಗು ಜನಿಸಿದಂತೆ ಸಾಹಿತ್ಯ ರಚನೆಯಾಗುತ್ತದೆ’ ಎಂದರು.

ಸಾಹಿತಿ ಸಿಕಂದರ್ ಪುಸ್ತಕ ಪರಿಚಯ ಮಾಡಿಕೊಟ್ಟರು. ಲೇಖಕಿ ನೂರ್‌ ಜಹಾನ್‌, ಲೇಖಕರಾದ ಅಬ್ದುಲ್ ಹೈ, ಜೈನುಲ್ಲಾ, ಕಲ್ಲಂ ಭಟ್, ಸುಜಾತಾ, ದಯಾನಂದ್ ಕಿನ್ನಾಳ, ರಂಗಕರ್ಮಿ ಪಿ.ಅಬ್ದುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT