ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಇ.ಬಿ. ಲಾಕರ್‌ನಿಂದ ₹58 ಸಾವಿರ ನಗದು ಕಳವು

Last Updated 10 ಸೆಪ್ಟೆಂಬರ್ 2022, 3:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಟಿ.ಬಿ. ಡ್ಯಾಂ ರಸ್ತೆಯ ಕೆ.ಇ.ಬಿ. ಕ್ಯಾಶ್‌ ಕೌಂಟರ್‌ ಲಾಕರ್‌ನಲ್ಲಿಟ್ಟಿದ್ದ ₹58,825 ನಗದು ಹಣ ಗುರುವಾರ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ.

‘ಕ್ಯಾಶ್‌ ಕೌಂಟರ್‌ನಲ್ಲಿ ಮಧ್ಯಾಹ್ನ 2ರಿಂದ 5ರ ವರೆಗೆ ಗ್ರಾಹಕರಿಂದ ಸಂಗ್ರಹವಾಗಿದ್ದ ₹58,825 ನಗದು ಲಾಕರ್‌ನಲ್ಲಿ ಇಡಲಾಗಿತ್ತು. ಆದರೆ, ಗುರುವಾರ ರಾತ್ರಿ ಯಾರೋ ಕ್ಯಾಶ್‌ ಕೌಂಟರ್‌ ಬಾಗಿಲು ಮುರಿದು, ಗ್ಯಾಸ್‌ ಕಟರ್‌ನಿಂದ ಲಾಕರ್‌ ಕಟ್‌ ಮಾಡಿ ಹಣ ಕಳವು ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ನೌಕರರು ಎಂದಿನಂತೆ ಸ್ವಚ್ಛತೆಗೆ ಬಂದಾಗ ಕಳುವಾಗಿರುವ ವಿಷಯ ಗೊತ್ತಾಗಿದೆ. ಬಡಾವಣೆ ಪೊಲೀಸ್‌ ಠಾಣೆಗೆ ದೂರು ಕೊಡಲಾಗಿದೆ’ ಎಂದು ಜೆಸ್ಕಾಂ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT