ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್

ಶುಕ್ರವಾರ, ಏಪ್ರಿಲ್ 19, 2019
22 °C

ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್

Published:
Updated:

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಒಟ್ಟು 9 ರ‍್ಯಾಂಕ್ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಕಾಲೇಜಿನ ಕುಸುಮಾ ಉಜ್ಜಿನಿ (594 ಅಂಕ), ಹೊಸಮನಿ ಚಂದ್ರಪ್ಪ (591), ನಾಗರಾಜ್ (591), ಎಸ್‌.ಓಮೇಶ (591), ಕೆ.ಜಿ.ಸಚಿನ್ (589), ಎಚ್‌.ಸುರೇಶ (589), ಹರಿಜನಸೊಪ್ಪಿನ ಹುಚ್ಚೆಂಗಮ್ಮ (588), ನಂದೀಶ ಮಠದ (588) ಮತ್ತು ಸರಸ್ವತಿ ಅಂಗಡಿ (587) ರಾಜ್ಯದಲ್ಲಿಯೇ ಅತಿಹೆಚ್ಚು ಅಂಕಪಡೆದು ಸಾಧನೆ ಮೆರೆದಿದ್ದಾರೆ.

ಕುಸುಮ ಉಜ್ಜಿನಿ ಪಟ್ಟಣದ ದೇವೇಂದ್ರಪ್ಪ– ಜಯಮ್ಮ ದಂಪತಿಯ ಪುತ್ರಿಯಾಗಿದ್ದು, ದೇವೇಂದ್ರಪ್ಪ ಅವರು ಪಂಕ್ಚರ್ ಶಾಪ್ ನಡೆಸಿ ಜೀವನ ನಡೆಸುತ್ತಿದ್ದಾರೆ.

‘ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಸಂತಸ ತಂದಿದೆ. ಇಂತಿಷ್ಟು ಸಮಯವೆಂದು ನಿಗದಿ ಪಡೆಸಿಕೊಳ್ಳದೆ, ಇಷ್ಟವಾದ ವಿಷಯ ಓದುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಪಂಕ್ಚರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಗುರುಗಳ ಹಾಗೂ ತಂದೆ ತಾಯಿ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ’ ಎಂದು ಕುಸುಮ ತಮ್ಮ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. 

ದಾವಣಗೆರೆ ಹರಪನಹಳ್ಳಿ ತಾಲ್ಲೂಕಿನ ಶಿವಕುಮಾರ ಬಾರಿಕಾರ 589 ಅಂಕ ಪಡೆದು, ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕ ಪಡೆದ 10 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನಷ್ಟು...

2016 ಗಣಿ ನಾಡಿಗೆ ಮತ್ತೆ ಕೀರ್ತಿ ತಂದ ಕೊಟ್ಟೂರು

2018 ಕೊಟ್ಟೂರು 'ಇಂದೂ' ಕಾಲೇಜಿನ ಮೂವರು ರಾಜ್ಯಕ್ಕೆ ಪ್ರಥಮ

2018 ಕಲಾ ವಿಭಾಗದಲ್ಲಿ ಕನ್ನಡ ಮಾಧ್ಯಮದ ಚೈತ್ರಾ ಅತಿ ಹೆಚ್ಚು ಅಂಕ

ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

ಮೇಲೇರಿದ ಚಿಕ್ಕೋಡಿ, ಕೊಂಚ ಚೇತರಿಸಿಕೊಂಡ ಬೆಳಗಾವಿ

ದ್ವಿತೀಯ ಪಿಯು: ದಾವಣಗೆರೆಗೆ ಶೇ 62.53 ಫಲಿತಾಂಶ

ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ

ಬಿಕಾಂ– ಅವಕಾಶಗಳ ಹುಲ್ಲುಗಾವಲು

ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ

ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !