ಕುಡಿತಿನಿ ಪಟ್ಟಣ ಪಂಚಾಯ್ತಿ: 43 ನಾಮಪತ್ರ ಸಲ್ಲಿಕೆ

7

ಕುಡಿತಿನಿ ಪಟ್ಟಣ ಪಂಚಾಯ್ತಿ: 43 ನಾಮಪತ್ರ ಸಲ್ಲಿಕೆ

Published:
Updated:

ತೋರಣಗಲ್ಲು: ಸಮೀಪದ ಕುಡಿತಿನಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತು. ಬಿ ಫಾರ್ಮ್‌ ದೊರಕದ ಹಲವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌: ಭಿನ್ನಾಭಿಪ್ರಾಯಗಳನ್ನು ಶಮನ ಗೊಳಿಸಲು ಬಂದ ಕಾಂಗ್ರೆಸ್‌ ಶಾಸಕ ಈ.ತುಕಾರಾಂ ಆಕಾಂಕ್ಷಿಗಳನ್ನು ಸಮಾಧಾನಗೊಳಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೆಲವು ಮುಖಂಡರು, ಶಾಸಕರ ಆಪ್ತರ ವರ್ತನೆಗಳಿಂದ ಬೇಸರವಾಗಿದೆ ಎಂದು ಅಳಲು ತೋಡಿಕೊಂಡರು. ಅವರನ್ನು ಸಮಾಧಾನಪಡಿಸಿದ ಶಾಸಕ, ‘ಮುಂದಿನ ದಿನಗಳಲ್ಲಿ ಈ ಸಮಸ್ಯೆ ಏರ್ಪಡದಂತೆ ಎಚ್ಚರ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಜೆಪಿಯಲ್ಲೂ ಇಂಥದ್ದೇ ಸನ್ನಿವೇಶ ಏರ್ಪಟ್ಟಿತ್ತು. ಮುಖಂಡ ಡಿ. ರಾಘವೇಂದ್ರ ಆಕಾಂಕ್ಷಿಗಳೊಂದಿಗೆ ಚರ್ಚಿಸಿದರು. ನಂತರ ಬಿ ಫಾರಂ ವಿತರಿಸಿದರು. ಜೆಡಿಎಸ್‌ನಲ್ಲಿ ಯಾವ ಗೊಂದಲವೂ ಇಲ್ಲದೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸಮೀಪದ ಕುಡಿತಿನಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ಒಟ್ಟು 43 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಅತಿ ಹೆಚ್ಚು (17) ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ 8 ನಾಮಪತ್ರ, ಜೆಡಿಎಸ್‌ 6 ನಾಮಪತ್ರ ಸಲ್ಲಿಸಿದೆ. ಪಕ್ಷೇತರರು 12 ಮಂದಿ ಇದ್ದಾರೆ. ಮಹಿಳೆಯರು ಹೆಚ್ಚುಳ 43 ಮಂದಿ ಪೈಕಿ 17 ಮಹಿಳೆಯರಿರುವುದು ವಿಶೇಷ.
ಆ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಆ.23 ಕೊನೇ ದಿನ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !