ಗ್ರಂಥಾಲಯಕ್ಕೆ ಕಾಯಕಲ್ಪ!

7

ಗ್ರಂಥಾಲಯಕ್ಕೆ ಕಾಯಕಲ್ಪ!

Published:
Updated:
ಸಂಡೂರಿನಲ್ಲಿ ನವೀಕರಣಗೊಂಡ ಸಾರ್ವಜನಿಕ ಗ್ರಂಥಾಲಯದ ಹೊರನೋಟ.

 ಸಂಡೂರು: ದುರಸ್ತಿಗಾಗಿ ಮೂರು ವರ್ಷದಿಂದ ಸಣ್ಣ ಕೊಠಡಿಗೆ ಸ್ಥಳಾಂತರಗೊಂಡು ಓದುಗರಿಂದ ಬಹುತೇಕ ದೂರವಾಗಿದ್ದ ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಕಾಯಕಲ್ಪ ಒದಗಿದೆ. ಹೊಸ ರೂಪದಲ್ಲಿ ಗ್ರಂಥಾಲಯ ಓದುಗರನ್ನು ಸೆಳೆಯುತ್ತಿದೆ.

ರಾಜ್ಯ ಸರ್ಕಾರ ಒಡೆತನದ ಎಂಎಂಎಲ್ (ಮೈಸೂರ್ ಮಿನರಲ್ಸ್ ಲಿಮಿಟೆಡ್) ಕಂಪೆನಿಯ ಅನುದಾನದಲ್ಲಿ ಪುನರ್ ನಿರ್ಮಾಣಗೊಂಡಿರುವ ಗ್ರಂಥಾಲಯ ಇನ್ನೂ ಗ್ರಂಥಾಲಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಆದರೆ ಗ್ರಂಥಾಲಯಕ್ಕೆ ಹೊಸ ಪುಸ್ತಕಗಳು ಬಂದಿವೆ. ಜಿಂದಾಲ್ ಕಂಪೆನಿಯಿಂದ ಗ್ರಂಥಾಲಯಕ್ಕೆ ಬೇಕಾದ ಕುರ್ಚಿ, ಟೇಬಲ್‌ಗಳು ಪೂರೈಕೆಯಾಗಿವೆ. ಅವುಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯವೂ ಆರಂಭವಾಗಿದೆ.

‘ಮೇಲಧಿಕಾರಿಗಳ ಸೂಚನೆ ಮೇರೆಗೆ ಹೊಸ ಕಟ್ಟಡದಲ್ಲಿ ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ’ ಎಂದು ಗ್ರಂಥಾಲಯದ ಮೇಲ್ವಿಚಾರಕ ಸುದರ್ಶನ ದೇಸಾಯಿ. ‘ಪ್ರಜಾವಾಣಿ’ಗೆ ತಿಳಿಸಿದರು. ಜಿಂದಾಲ್ ಸಂಸ್ಥೆಯು ಗ್ರಂಥಾಲಯಕ್ಕೆ 72 ಕುರ್ಚಿ, 16 ಟೇಬಲ್, ಒಂದು ಕೌಂಟರ್ ಟೇಬಲ್, ಒಂದು ಪೇಪರ್ ಸ್ಟ್ಯಾಂಡ್, 22 ರಾ್ಯಾಕ್‌ ಹಾಗೂ 10 ಮಕ್ಕಳ ಕುರ್ಚಿಗಳನ್ನು ನೀಡಿದೆ.

ಎರಡು ಅಂತಸ್ತಿನ ಹೊಸ ಕಟ್ಟಡದ ಕೆಳ ಅಂತಸ್ತಿನಲ್ಲಿ ಓದುಗರಿಗೆ ಪತ್ರಿಕೆ, ಪುಸ್ತಕಗಳನ್ನು ಓದಲು ಅನುಕೂಲ ಕಲ್ಪಸಲಾಗಿದೆ. ಎರಡನೆ ಅಂತಸ್ತಿನಲ್ಲಿ ಪುಸ್ತಕಗಳ ಜೊತೆಗೆ ಮಕ್ಕಳಿಗೆ, ಮಹಿಳೆಯರಿಗೆ ಕುಳಿತು ಓದಲು ಪ್ರತ್ಯೇಕ ಕೊಠಡಿ ಮತ್ತು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಕಟ್ಟಡದಲ್ಲಿ ಶೌಚಾಲಯ ನಿರ್ಮಾಣ ಅಪೂರ್ಣವಾಗಿದೆ.

891 ಸದಸ್ಯರು: ಸದ್ಯಕ್ಕೆ 891 ಸದಸ್ಯರುಳ್ಳ ಗ್ರಂಥಾಲಯ ದಿನದಿಂದ ದಿನಕ್ಕೆ ಹೆಚ್ಚು ಓದುಗರನ್ನು ಸೆಳೆಯುತ್ತಿದೆ. ಹೊಸ ರೂಪ ಮತ್ತು ಸೌಕರ್ಯವುಳ್ಳ ಗ್ರಂಥಾಲಯ ಸಂತಸ ತಂದಿದೆ ಎಂದೆ ಪಟ್ಟಣದ ಸಿದ್ದಣ್ಣ, ಕುಮಾರಸ್ವಾಮಿ, ತಿಳಿಸಿದರು.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !