ರಾಜಿ ಮಾಡಿ ನೆಮ್ಮದಿ ನೀಡಿದ ಅದಾಲತ್

7
694 ಪ್ರಕರಣಗಳು ಇತ್ಯರ್ಥ

ರಾಜಿ ಮಾಡಿ ನೆಮ್ಮದಿ ನೀಡಿದ ಅದಾಲತ್

Published:
Updated:

ಬಳ್ಳಾರಿ: ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದ ಪರ್ಯಾಯ ವ್ಯಾಜ್ಯಗಳ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 694 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಒಟ್ಟು 8 ಟೇಬಲ್‌ಗಳಲ್ಲಿ ನ್ಯಾಯಾಧೀಶರು, ಹೆಚ್ಚುವರಿ ನ್ಯಾಯಾಧೀಶರು ಪ್ರಕರಣಗಳ ರಾಜಿ ಪಂಚಾಯ್ತಿ ನಡೆಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಬ್ಯಾಂಕ್‌ ಸಾಲ ಬಾಕಿ ವಸೂಲಾತಿಗೆ ಸಂಬಂಧಿಸಿದ 755, ವಿದ್ಯುತ್‌ ಬಿಲ್‌ ಪಾವತಿಯ 340 ಪ್ರಕರಣಗಳು ದಾಖಲಾಗಿದ್ದವು.

ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್, ಮೋಟರ್ ವಾಹನ ಅಪಘಾತ, ಕಾರ್ಮಿಕ ವ್ಯಾಜ್ಯ, ಕೌಟುಂಬಿಕ ಕಲಹ, ಸಿವಿಲ್ ಪ್ರಕರಣಗಳ ರಾಜಿ ಪ್ರಯತ್ನ ನಡೆಯಿತು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಮಾತನಾಡಿ, ವಾಜ್ಯಪೂರ್ವ ಹಾಗೂ ವ್ಯಾಜ್ಯ ಪ್ರಕರಣಗಳಲ್ಲಿ ಕೆಲವರು ರಾಜಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಿಕೊಂಡಿದ್ದಾರೆ. ಉಳಿದವರು ಮುಂದಿನ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ’ ಎಂದರು.

ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಖಾಸಿಂ ಚೂರಿಖಾನ್, ಜಿಲ್ಲಾ ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ವಿಫುಲ ಎಂ.ಪೂಜಾರಿ, ನ್ಯಾಯಾಧೀಶರಾದ ಸರ್ವಮಂಗಳ, ಎಸ್.ಕೆ.ಆನಂದ, ವೀಣಾ ನಾಯ್ಕ, ಅಶ್ವಿನಿ ಕೋರೆ, ನಿರ್ಮಲ, ಮುರಿಗೇಂದ್ರ ತುಬಾಕೆ ಅದಾಲತ್‌ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !