ಹಂಪಿ ಉತ್ಸವಕ್ಕೆ ಅಡ್ಡಿಯಾದ ಲೋಕಸಭೆ ಉಪ‌ಚುನಾವಣೆ

7

ಹಂಪಿ ಉತ್ಸವಕ್ಕೆ ಅಡ್ಡಿಯಾದ ಲೋಕಸಭೆ ಉಪ‌ಚುನಾವಣೆ

Published:
Updated:

ಬಳ್ಳಾರಿ: ನವೆಂಬರ್‌ 3ರಂದು ಇಲ್ಲಿನ ಲೋಕಸಭೆ ಉಪ ಚುನಾವಣೆ ನಡೆಯಲಿರುವುದರಿಂದ ಅಂದಿನಿಂದ ಮೂರು ದಿನ ನಡೆಯಬೇಕಾಗಿದ್ದ ಹಂಪಿ‌ ಉತ್ಸವವನ್ನು ಮುಂದೂಡಬೇಕಾದ ‌ಅನಿವಾರ್ಯ ಉಂಟಾಗಿದೆ.

ಉತ್ಸವದಲ್ಲಿ ಪಾಲ್ಗೊಳ್ಳಲು ಸ್ಥಳೀಯ ಕಲಾವಿದರಿಂದ ‌ಜಿಲ್ಲಾಡಳಿತ‌ ಅರ್ಜಿಗಳನ್ನು ಆಹ್ವಾನಿಸಿತ್ತು. ವೇದಿಕೆಗಳ ನಿರ್ಮಾಣ ಮತ್ತು ಮೂಲಸೌಕರ್ಯ ಕಲ್ಪಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡ ಸಮಯದಲ್ಲಿಯೇ ಚುನಾವಣೆ ಆಯೋಗವು‌ ಉಪಚುನಾವಣೆಯ ದಿನಾಂಕ ಘೋಷಿಸಿದೆ.

ಹಂಪಿಯಲ್ಲಿ ಪ್ರತಿ‌ ವರ್ಷ‌ ನವೆಂಬರ್ 3 ರಿಂದ 5ರವರೆಗೆ ಹಂಪಿ‌ ಉತ್ಸವ ನಡೆಯುವ‌ ಸಂಪ್ರದಾಯಕ್ಕೆ ಈ ಬಾರಿ ಅಡಚಣೆ ಎದುರಾಗಿದೆ.
ಸಂಸತ್ ಸದಸ್ಯರಾಗಿದ್ದ ಬಿ.ಶ್ರೀರಾಮುಲು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾರ್ಚ್‌ನಲ್ಲಿ ‌ರಾಜೀನಾಮೆ ನೀಡಿದ್ದರು. ನಂತರ ಮೊಳಕಾಲ್ಮೂರು ಶಾಸಕರಾಗಿ ಆಯ್ಕೆಯಾದರು.

ಸಂಸತ್ ಸದಸ್ಯರಾಗುವ‌ ಮುನ್ನ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಅವರು 2014ರಲ್ಲಿ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !