ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಾತಾ ಕಾಲೇಜಿಗೆ ಪ್ರಶಸ್ತಿ

7

ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಾತಾ ಕಾಲೇಜಿಗೆ ಪ್ರಶಸ್ತಿ

Published:
Updated:
Deccan Herald

ಹೊಸಪೇಟೆ: ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಇಲ್ಲಿನ ಮಾತಾ ಪದವಿ ‘ಎ’ ಕಾಲೇಜು ತಂಡ ಜಯಶಾಲಿಯಾಗಿದೆ.

ರೋಸ್‌ಬಡ್‌ ತಂಡವನ್ನು 52–47ರಿಂದ ಸೋಲಿಸಿದ ಮಾತಾ ಕಾಲೇಜು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ವಿಜೇತ ತಂಡಕ್ಕೆ ₨10 ಸಾವಿರ ನಗದು, ಟ್ರೋಫಿ ಪ್ರದಾನ ಮಾಡಿದರೆ, ರನ್ನರ್‌ ಅಪ್‌ ತಂಡಕ್ಕೆ ₨5 ಸಾವಿರ ನಗದು,ಟ್ರೋಫಿ ನೀಡಲಾಯಿತು.

ರಾತ್ರಿ 11ರ ವರೆಗೆ ಕ್ರೀಡಾಂಗಣದಲ್ಲಿ ಕುಳಿತು ಜನ ಪಂದ್ಯವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಧಾರವಾಡ ತಂಡವನ್ನು ಮಾತಾ ಪದವಿ ಕಾಲೇಜು ಸೋಲಿಸಿ, ಫೈನಲ್‌ ಪ್ರವೇಶಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ದಾವಣಗೆರೆಯನ್ನು ಮಣಿಸಿ ರೋಸ್‌ಬಡ್‌ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿತು.

ಬ್ಯಾಸ್ಕೆಟ್‌ಬಾಲ್‌ ತರಬೇತುದಾರ ಕಲೀಂ, ಅಥ್ಲೀಟ್‌ ತರಬೇತುದಾರ ರೋಹಿಣಿ, , ರಾಜೇಶ್‌, ಗಂಗಾಧರ, ರಾಹುಲ್‌, ಚೇತನ್‌, ಅಮಿತ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !