ಥ್ರೋಬಾಲ್‌ನಲ್ಲಿ ಮಹಾಬಲೇಶ್ವರಪ್ಪ ಕಾಲೇಜಿಗೆ ಜಯ

7

ಥ್ರೋಬಾಲ್‌ನಲ್ಲಿ ಮಹಾಬಲೇಶ್ವರಪ್ಪ ಕಾಲೇಜಿಗೆ ಜಯ

Published:
Updated:
Deccan Herald

ಹೊಸಪೇಟೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕಲಬುರ್ಗಿ ವಲಯ ಮಟ್ಟದ ಅಂತರ ಕಾಲೇಜು ಮಹಿಳೆಯರ ಥ್ರೋಬಾಲ್‌ ಪಂದ್ಯಾವಳಿಯಲ್ಲಿ ಬಳ್ಳಾರಿಯ ರಾವ್‌ ಬಹಾದ್ದೂರ್‌ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು ಪ್ರಶಸ್ತಿ ಜಯಿಸಿದೆ.

ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಮಂಗಳವಾರ ನಡೆದ ಅಂತಿಮ ಪಂದ್ಯದಲ್ಲಿ ಮಹಾಬಲೇಶ್ವರಪ್ಪ ಕಾಲೇಜು ತಂಡವು ಬಾಗಲಕೋಟೆಯ ಬಸವೇಶ್ವರ ತಾಂತ್ರಿಕ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿ ಬಾಚಿಕೊಂಡಿತು.

ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದವು. ವಿ.ಟಿ.ಯು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸೈಯದ್‌ ಉದ್ದೀನ್‌, ಪ್ರಾಚಾರ್ಯ ಎಸ್‌.ಎಂ. ಶಶಿಧರ, ಟಿ.ಬಿ. ಡ್ಯಾಂ ಸಿ.ಪಿ.ಐ. ವಿ. ನಾರಾಯಣ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಜಿ.ಎಸ್‌. ಸತೀಶ್‌, ಆರ್‌.ವೈ.ಎಂ.ಇ.ಸಿ. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ವಿಜಯ ಮಹಾಂತೇಶ್‌, ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಯು.ಎಂ. ರೋಹಿತ್‌, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್‌. ಮಂಜುನಾಥ, ಪಾರ್ವತಿ ಕಡ್ಲಿ, ಎ.ಗಿರೀಶ್‌, ಪ್ರಮೋದ ಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !