ಹೊಸಪೇಟೆಯಲ್ಲಿ ಮಲೆನಾಡ ಸೊಬಗು

7

ಹೊಸಪೇಟೆಯಲ್ಲಿ ಮಲೆನಾಡ ಸೊಬಗು

Published:
Updated:
Deccan Herald

ಹೊಸಪೇಟೆ: ಐದು ದಿನಗಳಿಂದ ಎಡೆಬಿಡದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ಸೊಬಗು, ವಯ್ಯಾರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡುವಂತಾಗಿದೆ.

ಶುಕ್ರವಾರ ಆರಂಭಗೊಂಡಿದ್ದ ಜಿಟಿಜಿಟಿ ಮಳೆ ಮಂಗಳವಾರ ಕೂಡ ಮುಂದುವರಿಯಿತು. ವರ್ಷಧಾರೆಯಿಂದ ಸುತ್ತಮುತ್ತಲಿನ ಪರಿಸರ ಹಚ್ಚ ಹಸಿರಾಗಿದೆ. ಸೂರ್ಯನ ಕಿರಣಗಳು ಧರೆಯನ್ನು ಸ್ಪರ್ಶಿಸಿ ಐದು ದಿನಗಳಾಗಿವೆ. ಮಳೆಯೊಂದಿಗೆ ತಂಗಾಳಿ ಕೂಡ ಬೀಸುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ.

ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ಮಳೆರಾಯನ ದರ್ಶನವಾಯಿತು. ಜಿಟಿಜಿಟಿ ಮಳೆಯಿಂದಾಗಿ ಜನ ವಾಯುವಿಹಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮಳೆಗಿಂತ ಮುನ್ನವೇ ಎದ್ದು ಹೋದವರು ಮಳೆಯಲ್ಲೇ ನೆನೆದು ಹಿಂತಿರುಗಿದರು.

ಬೆಳಿಗ್ಗೆ ಒಂಬತ್ತರಿಂದ ಹತ್ತು ಗಂಟೆಯ ಮಧ್ಯೆ ಮಳೆ ಸ್ವಲ್ಪ ಬಿರುಸಾಗಿ ಸುರಿಯಿತು. ಶಾಲಾ–ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರು ಪರದಾಟ ನಡೆಸಬೇಕಾಯಿತು. ಇನ್ನೊಂದೆಡೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಮಾಡಿಕೊಳ್ಳುತ್ತಿದ್ದ ಸಿದ್ಧತೆಗೆ ಸ್ವಲ್ಪ ಹಿನ್ನಡೆಯಾಯಿತು. ಮಳೆ ನಿಲ್ಲುವುದಿಲ್ಲ ಎನ್ನುವುದು ಖಾತ್ರಿಯಾದ ನಂತರ ವರ್ಷಧಾರೆಯಲ್ಲೇ ಕೆಲಸ ನಿರ್ವಹಿಸಿದರು.

ಮಳೆಯಿಂದಾಗಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಸಂಡೂರಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !