ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಗೆ ಮಂತ್ರಾಲಯದ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭೇಟಿ

Last Updated 29 ಸೆಪ್ಟೆಂಬರ್ 2019, 12:46 IST
ಅಕ್ಷರ ಗಾತ್ರ

ಹೊಸಪೇಟೆ: ಇತ್ತೀಚೆಗೆ ಬಂದ ಪ್ರವಾಹದಿಂದ ಹಾನಿಗೊಂಡಿರುವ ತಾಲ್ಲೂಕಿನ ಹಂಪಿ ರಘುನಂದನ ತೀರ್ಥರ ವೃಂದಾವನಕ್ಕೆ ಭಾನುವಾರ ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಶ್ರೀಗಳು, ‘ಕಾರ್ತಿಕ ಮಾಸದಲ್ಲಿ ರಘುನಂದನ ತೀರ್ಥರ ಆರಾಧನೆ ಮಾಡಲಾಗುತ್ತದೆ. ಆ ಕಾರಣಕ್ಕಾಗಿ ಇಲ್ಲಿಗೆ ಬಂದು ಅವರ ವೃಂದಾವನದ ದರ್ಶನ ಪಡೆಯುತ್ತಿರುವೆ. ಬರುವ ದಿನಗಳಲ್ಲಿ ವೃಂದಾವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

‘ಹಂಪಿ ಪವಿತ್ರ ಸ್ಥಳವಾಗಿದೆ. ಇದು ಕಲ್ಲು, ಬಂಡೆಗಳಿಂದ ಕೂಡಿರುವ ಸ್ಥಳವಲ್ಲ. ಇಲ್ಲಿ ಮಹಾನ್‌ ಋಷಿ, ಮುನಿಗಳು ನೆಲೆಸಿದ್ದರು. ಇಲ್ಲಿರುವ ಸ್ಮಾರಕಗಳು ಅತ್ಯಮೂಲ್ಯವಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’ ಎಂದರು.

ಮಠದ ಸಂಸ್ಕೃತ ವಿದ್ಯಾಪೀಠದ ವಾದಿರಾಜಾಚಾರ್ಯ, ದ್ವಾರಪಾಲಕ ಅನಂತ ಪುರಾಣಿಕ್, ವಿಚಾರಣಕರ್ತ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕ ರಾಮಕೃಷ್ಣ, ಎಂಜಿನಿಯರ್ ಸುರೇಶ್, ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯ ಜಿಲ್ಲಾ ಸಂಚಾಲಕ ಅನಂತ ಪದ್ಮನಾಭ ರಾವ್, ಅರ್ಚಕ ನರಸಿಂಹಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT