ಮಳೆಯಲ್ಲೇ ಪಂಜಿನ ಮೆರವಣಿಗೆ

7
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಮಳೆಯಲ್ಲೇ ಪಂಜಿನ ಮೆರವಣಿಗೆ

Published:
Updated:
Deccan Herald

ಬಳ್ಳಾರಿ: 'ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು' ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ನಗರದಲ್ಲಿ ಮಂಗಳವಾರ ರಾತ್ರಿ ಮಳೆಯ ನಡುವೆಯೇ ಪಂಜಿನ ಮೆರವಣಿಗೆ ನಡೆಸಿದರು.

‘ಬಡ್ತಿ ಮೀಸಲಾತಿ ನಿಯಮದ ಅನ್ವಯ ಹಿಂಬಡ್ತಿ ಪಡೆದಿರುವ ಎಲ್ಲಾ ನೌಕರರನ್ನು ಹಿಂದಿನ ಹುದ್ದೆಯಲ್ಲೇ ಮುಂದುವರೆಸಬೇಕು. ಅದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದು ಸಮಿತಿಯ ಮುಖಂಡ ಗೋವರ್ಧನ ಆಗ್ರಹಿಸಿದರು.

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮೊದಲಿನ ರೂಪದಲ್ಲೇ ಉಳಿಸಬೇಕು. ಪರಿಶಿಷ್ಟ ಪಂಗಡದವರಿಗೆ ನೀಡಲಾಗಿರುವ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಟ ಜಮೀನು ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್‌)ಯಲ್ಲಿ ಇರುವ ‘ಕೆಲವು’ ಎಂಬ ಪದವನ್ನು ತೆಗೆದು ಎಲ್ಲ ಜಮೀನುಗಳಿಗೂ ಕಾಯ್ದೆಯನ್ನು ಅನ್ವಯಿಸಬೇಕು’ ಎಂದು ಆಗ್ರಹಿಸಿದರು.

‘ಭೂ ಮಂಜೂರಾತಿ ಪ್ರಕರಣಗಳಲ್ಲಿ ಶೇ 50 ರಷ್ಟು ಭೂಮಿಯನ್ನು ಪರಿಶಿಷ್ಟರಿಗೆ ನೀಡಬೇಕು. ಪರಿಶಿಷ್ಟರಿಗೆ ಮೀಸಲಿರುವ ಯೋಜನೆಗಳ ದುರುಪಯೋಗವನ್ನು ತಡೆಯಬೇಕು. ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರದ ನಗರೂರು ನಾರಾಯಣರಾವ್‌ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಮಳೆ–ಗಾಳಿಯಿಂದ ನಂದಿ ಹೋಗುತ್ತಿದ್ದ ಪಂಜುಗಳನ್ನು ಮತ್ತೆ ಮತ್ತೆ ಅಂಟಿಸಿ ಮೆರವಣಿಗೆ ನಡೆಸಿದ್ದು ಗಮನ ಸೆಳೆಯಿತು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !