ಭಾನುವಾರ, ಸೆಪ್ಟೆಂಬರ್ 15, 2019
30 °C

ಸಾಮೂಹಿಕ ಭಗವದ್ಗೀತೆ ಪಠಣ

Published:
Updated:
Prajavani

ಹೊಸಪೇಟೆ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಪಟೇಲ್‌ ನಗರದಲ್ಲಿ ಭಾನುವಾರ ಕೃಷ್ಣ ಪೂಜೆ, ಸಾಮೂಹಿಕ ಭಗವದ್ಗೀತೆ ಪಠಣ ನಡೆಯಿತು.

ಮಂತ್ರಾಲಯ ಗುರು ಸಾರ್ವಭೌಮ ದಾಸ ಸಾಹಿತ್ಯ ಯೋಜನೆಯ ಜಿಲ್ಲಾ ಸಂಯೋಜಕ ಅನಂತ ಪದ್ಮನಾಭರಾವ್‌ ಮಾತನಾಡಿ, ‘ಕೃಷ್ಣ ಉಪದೇಶ ಮಾಡಿದ ಭಗವದ್ಗೀತೆ ಬಗ್ಗೆ ತಿಳಿದುಕೊಂಡರೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳನ್ನು ಎದುರಿಸಬಹುದು. ಗೀತೆಯಲ್ಲಿರುವ ಬಹುತೇಕ ಅಂಶಗಳು ಮನುಷ್ಯನ ನಿತ್ಯ ಜೀವನಕ್ಕೆ ಸಂಬಂಧಿಸಿವೆ. ಇಡೀ ಮನುಕುಲಕ್ಕೆ ಭಗವದ್ಗೀತೆ ದಾರಿದೀಪವಾಗಿದೆ’ ಎಂದು ಹೇಳಿದರು. 

ಸೇವಾ ಟ್ರಸ್ಟ್‌ನ ರಾಘವೇಂದ್ರ ಶೆಟ್ಟಿ, ಜ್ಞಾನವೇದಿಕೆ ಪ್ರಭೋದ ಸೇವಾ ಸಮಿತಿ ಶ್ರೀಭಗವದ್ಗೀತೆ (ತೌರತ್) ಸೇವಾ ಟ್ರಸ್ಟ್‌ನ ಶ್ರೀದೇವಿ, ಗಂಗಾಧರ್ ಇದ್ದರು. ಸಾಮೂಹಿಕ ಗೀತ ಗಾಯನ, ಸಂಗೀತ ಕಾರ್ಯಕ್ರಮ, ಮಕ್ಕಳಿಂದ ಭರತನಾಟ್ಯ ನಡೆಯಿತು.
 

Post Comments (+)