ಭಾನುವಾರ, ಸೆಪ್ಟೆಂಬರ್ 22, 2019
27 °C

ಪೀರಲ ದೇವರ ದರ್ಶನಕ್ಕೆ ಜನದಟ್ಟಣೆ

Published:
Updated:
Prajavani

ಹೊಸಪೇಟೆ: ಮೊಹರಂ ಪ್ರಯುಕ್ತ ಇಲ್ಲಿನ ರಾಮಲಿ ಸ್ವಾಮಿ ಮಸೀದಿ ಬಳಿ ಪ್ರತಿಷ್ಠಾಪಿಸಿರುವ ಪೀರಲ ದೇವರ ದರ್ಶನಕ್ಕೆ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಜನ ಬಂದಿದ್ದರು.

ನಾಲ್ಕು ತಿಂಗಳ ಹಿಂದೆ ಪೀರಲ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಇಡೀ ಪರಿಸರವನ್ನು ತಳಿರು ತೋರಣದಿಂದ ಅಲಂಕರಿಸಲಾಗಿದೆ. ಮಸೀದಿಗೆ ವಿದ್ಯುದ್ದೀಪಲಂಕಾರ ಮಾಡಲಾಗಿದೆ. ನಿತ್ಯ ವಿವಿಧ ಕಡೆಗಳಿಂದ ಜನ ಬಂದು ಹೋಗುತ್ತಿದ್ದಾರೆ.

ಮಂಗಳವಾರ ತಡರಾತ್ರಿ ಪೀರಲ ದೇವರ ಮೆರವಣಿಗೆ ಮಾಡಲಾಗುತ್ತದೆ. ಕೊನೆಯ ದಿನವಾಗಿರುವ ಕಾರಣ ಮಂಗಳವಾರ ದಿನವಿಡೀ ಜನದಟ್ಟಣೆ ಕಂಡು ಬಂತು. ಜನ ಸರತಿ ಸಾಲಿನಲ್ಲಿ ನಿಂತು ಪೀರಲ ದರ್ಶನ ಮಾಡಿದರು. ಹಿಂದೂ, ಮುಸ್ಲಿಮ ಸಮುದಾಯದ ಇಬ್ಬರೂ ಒಟ್ಟಿಗೆ ಪೀರಲ ದೇವರಿಗೆ ಹೂ, ನೈವೇದ್ಯ ಸಮರ್ಪಿಸಿ, ಭಾವೈಕ್ಯತೆ ಮೆರೆದರು. ಕೆಲವರು ಹುಲಿ ವೇಷ ಧರಿಸಿ, ಕುಣಿದು ಹರಕೆ ತೀರಿಸಿದರು.

ಮಸೀದಿಯ ಪರಿಸರದಲ್ಲಿ ಜಾತ್ರೆಯ ವಾತಾವರಣ ಇತ್ತು. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಮಸೀದಿ ಇರುವ ಕಾರಣ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. 

Post Comments (+)