ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟ ಪ್ರಕಟ

Last Updated 25 ಅಕ್ಟೋಬರ್ 2021, 12:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಂಶೋಧಕ ದಿವಂಗತ ಡಾ.ಎಂ.ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯವನ್ನು ವಿಜಯಪುರದ ಬಿ.ಎಲ್‌.ಡಿ. ಸಂಸ್ಥೆಯ ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಪ್ರಕಟಿಸಿದೆ.

ಸಮಗ್ರ ಸಾಹಿತ್ಯದ ಒಟ್ಟು ಇಪ್ಪತ್ತಾರು ಸಾವಿರ ಪುಟಗಳ 40 ಸಂಪುಟಗಳ ಸಿದ್ಧತೆಯಲ್ಲಿ ಪ್ರಾತ್ಯಕ್ಷಿಕೆ ಸಾಹಿತ್ಯದ ಭಾಗವಾದ ಚಿತ್ರ ಸಂಪುಟ, ಪತ್ರ-ವರದಿ ಸಂಪುಟ ಹಾಗೂ ಆಡಿಯೋ ವಿಡಿಯೋ ಸಂಪುಟಗಳಿಗೆ ಹೆಚ್ಚಿನ ಮಾಹಿತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿದೆ. ಹೀಗಾಗಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರಿಗೆ ಸೋಮವಾರ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಅವರು ಗೌರವ ಪ್ರತಿ ನೀಡಿದರು.

ಕುಲಸಚಿವ ಪ್ರೊ. ಸುಬ್ಬಣ್ಣ ರೈ, ಲಲಿತಕಲಾ ನಿಕಾಯದ ಡೀನ್‌ ಕೆ. ರವೀಂದ್ರನಾಥ, ವಿಜ್ಞಾನ ನಿಕಾಯದ ಡೀನ್‌ ಮಾಧವ ಪೆರಾಜೆ, ಶೈಕ್ಷಣಿಕ ಉಪಕುಲಸಚಿವ ಎಸ್.ವೈ. ಸೋಮಶೇಖರ್, ಪ್ರಾಧ್ಯಾಪಕ ಎಫ್.ಟಿ. ಹಳ್ಳಿಕೇರಿ, ಉಪ ಕುಲಸಚಿವ (ಆಡಳಿತ) ಎ. ವೆಂಕಟೇಶ, ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ಐಹೊಳೆ, ಇತಿಹಾಸ ಪ್ರಾಧ್ಯಾಪಕ ಶೇಕದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT