ಗುರುವಾರ , ಅಕ್ಟೋಬರ್ 24, 2019
21 °C

‘ತಾಯಿ, ಮಗುವಿನ ಆರೋಗ್ಯಕ್ಕೆ ಪೋಷಣೆ ಅಭಿಯಾನ’

Published:
Updated:
Prajavani

ಹೊಸಪೇಟೆ: ಪೋಷಣೆ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮ ಶುಕ್ರವಾರ ನಗರದ ಐದನೇ ಅಂಗನವಾಡಿ ಕೇಂದ್ರದಲ್ಲಿ ಜರುಗಿತು.

ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಉದ್ಘಾಟಿಸಿ, ‘ತಾಯಿ ಎರಡು ಪಟ್ಟು ಆಹಾರ ಸೇವಿಸಿದರೆ  ಹೊಟ್ಟೆಯಲ್ಲಿರುವ ಮಗುವಿಗೂ ಅದರ ಸ್ವಲ್ಪ ಅಂಶ ದೊರೆಯುತ್ತದೆ. ತರಕಾರಿ ಸೊಪ್ಪು, ಹಣ್ಣು, ಮೊಳಕೆ ಕಾಳುಗಳನ್ನು ತಿನ್ನಬೇಕು. ಇದರಿಂದ ಪೌಷ್ಟಿಕ ಆಹಾರ ದೇಹಕ್ಕೆ ದೊರೆಯುತ್ತದೆ. ಮಗು ಆರೋಗ್ಯಯುತವಾಗಿ ಬೆಳೆಯುತ್ತದೆ’ ಎಂದರು.

‘ಪೌಷ್ಟಿಕಾಂಶದ ಕೊರತೆಯಿಂದ ಮಗು ಜನಿಸುವ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ವಿಜಯನಗರ ಯುವಕರ ಬಳಗದ ಸೋಮಶೇಖರ ನಾಯಕ, ಸಂಚಾಲಕ ಕಾಶಿ ಬಡಿಗೇರ, ಆರೋಗ್ಯ ಇಲಾಖೆಯ ವ್ಯವಸ್ಥಾಪಕ ಧರ್ಮನಗೌಡ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ, ಅಂಗನವಾಡಿ ಕಾರ್ಯಕರ್ತೆ ಉಮಾಮಹೇಶ್ವರಿ, ಮಹಾಂಕಾಳಿ, ಕಾಶಿ ವಿಶ್ವನಾಥ, ದಿವಾಕರ, ಪ್ರಶಾಂತ್‌ ಕುಮಾರ್‌, ಆಶಾ ಕಾರ್ಯಕರ್ತೆ ಸಮಯ ಇದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಹಾಗೂ ವಿಜಯನಗರ ಯುವಕರ ಬಳಗದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)