ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ತರಬೇತಿ ಶಿಬಿರಕ್ಕೆ ತೆರೆ

Last Updated 22 ಮೇ 2019, 13:13 IST
ಅಕ್ಷರ ಗಾತ್ರ

ಹೊಸಪೇಟೆ: ಗಾನಗಂಗಾ ಕಲಾ ಪ್ರತಿಷ್ಠಾನವು ಕೊಳೆಗೇರಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಬುಧವಾರ ನಗರದಲ್ಲಿ ಕೊನೆಗೊಂಡಿತು.

ಶಿಬಿರದಲ್ಲಿ ಭಾಗವಹಿಸಿದ 50 ಮಕ್ಕಳಿಗೆ ಚಿತ್ರದುರ್ಗದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಂಧ ಕಲಾವಿದ ಮಲ್ಲಿಕಾರ್ಜುನ ತುರುವನೂರು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಬಳಿಕ ಮಾತನಾಡಿ, ‘ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಸಂಗೀತ, ನಾಟಕ ಶಿಕ್ಷಣ ಕೊಡಬೇಕು. ಅದಕ್ಕಾಗಿ ಶಿಕ್ಷಕರನ್ನು ನೇಮಿಸಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಉದ್ಯಮಿ ಕಟ್ಟಾ ನಂಜಪ್ಪ, ಸ್ಲಂ ಕಮಿಟಿಯ ವೆಂಕಮ್ಮ, ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರದಾರ್‌, ಮಹೇಶ್‌ ಆಚಾರ್‌, ಹನುಮಂತಪ್ಪ ಕಾರಿಗನೂರು, ಕಾಶಿನಾಥ ಚಿತ್ತವಾಡ್ಗಿ, ವಾಮದೇವ ಕಡ್ಡಿರಾಂಪುರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT