‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ ಆಚರಣೆ

7
‘ವ್ಯಕ್ತಿಯ ಕೊಲೆ, ವಿಚಾರದ್ದಲ್ಲ’

‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ ಆಚರಣೆ

Published:
Updated:
Deccan Herald

ಹೊಸಪೇಟೆ: ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಘಟಕದಿಂದ ಸೋಮವಾರ ನಗರದಲ್ಲಿ ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಿಂದ ಜಾಥಾ ನಡೆಸಲಾಯಿತು. ಬಸ್‌ ನಿಲ್ದಾಣ, ರೋಟರಿ ವೃತ್ತ, ಕಾಲೇಜು ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಹಾದು ಶಾಲೆಯಲ್ಲಿ ಕೊನೆಗೊಂಡಿತು.

ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್‌. ಸೌಭಾಗ್ಯಲಕ್ಷ್ಮಿ ಮಾತನಾಡಿ, ‘2015ರ ಆ. 20ರಂದು ಚಿಂತಕ ನರೇಂದ್ರ ದಾಭೋಲ್ಕರ್ ಅವರನ್ನು ಸಂಪ್ರದಾಯವಾದಿಗಳು ಹತ್ಯೆಗೈದಿದ್ದರು. ಅವರ ಸ್ಮರಣಾರ್ಥ ಇಡೀ ರಾಷ್ಟ್ರದಾದ್ಯಂತ ಈ ದಿನ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ ಆಚರಿಸಲಾಗುತ್ತಿದೆ. ದಾಭೋಲ್ಕರ್‌ ಹತ್ಯೆಯಾದ ದಿನವೇ ಅವರ ಹಂತಕರು ಸೆರೆ ಸಿಕ್ಕಿದ್ದಾರೆ’ ಎಂದರು.

‘ದಾಭೋಲ್ಕರ್‌ ಅವರು ವೈಜ್ಞಾನಿಕ ವಿಚಾರಧಾರೆಗಳನ್ನು ಬಿತ್ತಿ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಇದನ್ನು ಸಹಿಸದ ಕೆಲ ದುಷ್ಟಶಕ್ತಿಗಳು ಅವರನ್ನು ಹತ್ಯೆ ಮಾಡಿದ್ದವು’ ಎಂದು ಹೇಳಿದರು.

ಕಾರ್ಯದರ್ಶಿ ಟಿ.ಎಂ. ಉಷಾರಾಣಿ ಮಾತನಾಡಿ, ‘ದಾಭೋಲ್ಕರ್‌ ಅವರು ಅಂಧಶ್ರದ್ಧೆ ನಿರ್ಮೂಲನಾ ಸಮಿತಿ ಮಾಡಿ, ಪವಾಡ ಬಯಲು ಕಾರ್ಯಕ್ರಮಗಳ ಮೂಲಕ ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನಜಾಗೃತಿ ಮಾಡಿದ್ದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಅದನ್ನು ಸಹಿಸದೆ ಅವರ ಕೊಲೆ ಮಾಡಿವೆ. ಒಬ್ಬ ವ್ಯಕ್ತಿಯನ್ನು ಕೊಂದಿರಬಹುದು. ಆದರೆ, ಅವರ ವಿಚಾರಗಳನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ’ ಎಂದು ತಿಳಿಸಿದರು.

ಸಮಿತಿಯ ಸದಸ್ಯರಾದ ಎಚ್‌.ಎಂ. ಜಂಬುನಾಥ, ತಾಯಪ್ಪ ನಾಯಕ, ರಮೇಶ, ಚನ್ನಬಸವಯ್ಯ, ಮುಖ್ಯಶಿಕ್ಷಕ ಚಂದ್ರಪ್ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !