‘ಬೆಂಬಲ ಬೆಲೆ ನಿಗದಿಪಡಿಸಿದರೆ ಸಂಕಷ್ಟ ದೂರ’

7

‘ಬೆಂಬಲ ಬೆಲೆ ನಿಗದಿಪಡಿಸಿದರೆ ಸಂಕಷ್ಟ ದೂರ’

Published:
Updated:
Deccan Herald

ಹೊಸಪೇಟೆ: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಬೆಳೆವ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವವರೆಗೆ ಅನ್ನದಾತ ಸಂಕಷ್ಟದಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಜಿಲ್ಲಾ ಉಪಾಧ್ಯಕ್ಷ ಜೆ.ಎನ್‌. ಕಾಳಿದಾಸ್‌ ಹೇಳಿದರು.

ಸಂಘದಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರೈತರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

‘ರೈತರು ಬೆಳೆದ ಬೆಳೆಗಳಿಗೆ ದೇಶದ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ಬೆಲೆ ಇದೆ. ಕೆಲವೆಡೆ ಸೂಕ್ತ ಬೆಲೆ ಇದ್ದರೆ, ಕೆಲವೆಡೆ ಅದು ಸೂಕ್ತವಾಗಿಲ್ಲ. ಈ ತಾರತಮ್ಯ ಹೋಗಬೇಕು. ಇಡೀ ದೇಶದಲ್ಲಿ ಒಂದೇ ರೀತಿಯ ಬೆಲೆ ನಿಗದಿಪಡಿಸಿ, ರೈತರು ಮೇಲೆ ಬರಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರೈತರು ಬಹಳ ಸಹನಶೀಲರು. ಹೀಗಾಗಿಯೇ ಸರ್ಕಾರಗಳು ನಮ್ಮ ಸಹನೆಯನ್ನು ಪರೀಕ್ಷೆ ಮಾಡುತ್ತಿವೆ. ಈಗ ಸುಮ್ಮನೆ ಕೂರದೆ ಹಕ್ಕುಗಳಿಗಾಗಿ ಹೋರಾಟ ನಡೆಸುವ ಕಾಲ ಬಂದಿದೆ. ಅದಕ್ಕೆ ಎಲ್ಲರೂ ಸಿದ್ಧರಾಗಬೇಕು’ ಎಂದು ಹೇಳಿದರು.

ನಿವೃತ್ತ ತಹಶೀಲ್ದಾರ್‌ ವೆಂಕನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಧರ್‌ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಲಯ ಅರಣ್ಯ ಅಧಿಕಾರಿ ಎಂ. ನಾಗರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.

ಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಗ್ರೇಡ್‌–2 ತಹಶೀಲ್ದಾರ್‌ ಎಂ. ರೇಣುಕಾ, ಮುಖಂಡ ಗುಜ್ಜಲ್‌ ಶಿವರಾಮಪ್ಪ, ರೈತ ಮುಖಂಡರಾದ ಶಫಿ ಬರಕಾತಿ, ಹನುಮಂತಪ್ಪ, ಕಲ್ಲಾಳ್‌ ಪರಶುರಾಮಪ್ಪ, ಎಂ. ಪ್ರಕಾಶ್‌, ವ್ಯಾಸನಕೆರೆ ಶ್ರೀನಿವಾಸ, ಜಿ.ಬಿ. ನಾಗರಾಜ, ಸರಳಾ ಕಾವ್ಯ, ಬಸಯ್ಯ, ಎ. ಷಣ್ಮುಖಪ್ಪ, ಬಾಷಾ, ಹೊಸೂರಪ್ಪ, ಸೋಮಣ್ಣ, ಎನ್‌. ವೆಂಕಟೇಶ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !