ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವ ಜಲವಿದ್ದರೆ ಪ್ರಾಣಿ ಸಂಕುಲ’

Last Updated 22 ಮಾರ್ಚ್ 2019, 12:39 IST
ಅಕ್ಷರ ಗಾತ್ರ

ಹೊಸಪೇಟೆ: ‘ಜೀವ ಜಲವಿದ್ದರೆ ಪ್ರಾಣಿ ಸಂಕುಲದ ಉಳಿವು ಸಾಧ್ಯ’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ ಟಿ.ಚವ್ಹಾಣ ತಿಳಿಸಿದರು.

ಇಲ್ಲಿನ ನ್ಯಾಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜಲ ಕ್ಷಾಮ ಉಂಟಾಗಿದೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ನೀರನ್ನು ಹಣ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೊಂದು ದಿನ ನೀರು ಕೊಂಡುಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ. ಹೀಗಾಗಿ ಪ್ರತಿಯೊಬ್ಬರು ನೀರನ್ನು ಹಿತ-ಮಿತವಾಗಿ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ್, ‘ಪ್ರಕೃತಿಯಲ್ಲಿ ಕೋಟಿ ಕೋಟಿ ಜೀವ ರಾಶಿಗಳು ನೀರನ್ನೇ ಆಶ್ರಯಿಸಿ ಜೀವಿಸುತ್ತಿವೆ. ಪಶು-ಪಕ್ಷಿ ಪ್ರಾಣಿಗಳೆಲ್ಲವೂ ಬದುಕಿರುವುದು ನೀರಿನಿಂದಲೇ. ಆದರೆ ಮನುಷ್ಯ ನೀರನ್ನು ವ್ಯರ್ಥವಾಗಿ ಪೋಲು ಮಾಡುತ್ತಿರುವಷ್ಟು ಯಾವ ಪ್ರಾಣಿಗಳೂ ಮಾಡುತ್ತಿಲ್ಲ. ಇನ್ನಾದರೂ ಜೀವ ಜಲವನ್ನು ಮನುಷ್ಯರಾದ ನಾವೆಲ್ಲರೂ ಮಿತವಾಗಿ ಬಳಸೋಣ’ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಬಿ.ಚೆನ್ನಪ್ಪ, ಸಿ.ಎಸ್.ಶಿವನಗೌಡ್ರು, ವಕೀಲರ ಸಂಘದ ಅಧ್ಯಕ್ಷ ಎಚ್.ಉಮೇಶ, ಪ್ರಧಾನ ಕಾರ್ಯದರ್ಶಿ ಡಿ.ವೀರನಗೌಡ, ನೋಟರ್ ತಾರಿಹಳ್ಳಿ ಹನುಮಂತಪ್ಪ, ವಕೀಲರಾದ ಕೆ.ಜಂಬಣ್ಣ, ಜಗದೀಶ್, ಪಾರ್ವತಮ್ಮ, ಸುಮಂಗಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT