ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡದ ಕರ್ನಾಟಕ ರಕ್ಷಣಾ ವೇದಿಕೆ

7
ಸಮಗ್ರ ಅಭಿವೃದ್ಧಿಯ ಹೋರಾಟಕ್ಕೆ ಸದಾ ಸಿದ್ಧ

ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡದ ಕರ್ನಾಟಕ ರಕ್ಷಣಾ ವೇದಿಕೆ

Published:
Updated:
Deccan Herald

ಬಳ್ಳಾರಿ: ‘ಪ್ರತ್ಯೇಕ ರಾಜ್ಯ ಸ್ಥಾಪನೆಗೆ ನಮ್ಮ ಬೆಂಬಲವಿಲ್ಲ. ಆದರೆ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧತೆ ತೋರಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಕದ ಅಧ್ಯಕ್ಷ ಚಾನಾಳ್ ಶೇಖರ್ ಆಗ್ರಹಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಡಿ.ಎಂ.ನಂಜುಡಪ್ಪ ವರದಿಯ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೊಳಿಸಿ ಅಖಂಡ ಕರ್ನಾಟಕವನ್ನು ಉಳಿಸಬೇಕು’ ಎಂದು ಒತ್ತಾಯಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ನಡೆಸಿದ ಧರಣಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಗಳು ಪ್ರತ್ಯೇಕ ರಾಜ್ಯದ ಕೂಗಿನ ಬದಲು ವಿಧಾನಸಭೆಯಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು’ ಎಂದು ಪ್ರತಿಪಾದಿಸಿದರು.

‘ಭಾಷಾವಾರು ಪ್ರ್ಯಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯವನ್ನು ಇಬ್ಭಾಗ ಮಾಡಬಾರದು, ಪ್ರತ್ಯೇಕ ರಾಜ್ಯದ ಕೂಗು ರಾಜಕೀಯ ಹಿತಾಸಕ್ತಿಯದ್ದಷ್ಟೇ ಹೊರತು ಜನಪರವಲ್ಲ. ಅಭಿವೃದ್ಧಿಯ ಪರವೂ ಅಲ್ಲ’ ಎಂದು ಟೀಕಿಸಿದ ಅವರು, ‘ರಾಜಕಾರಣಿಗಳು ಅಧಿಕಾರದ ಆಸೆಗೆ ರಾಜ್ಯದ ಸಮಗ್ರತೆಗೆ ಧಕ್ಕೆಯುಂಟು ಮಾಡಿ ಏಕೀಕರಣಕ್ಕೆ ದುಡಿದ ಹಿರಿಯರಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ 371ಜೆ ವಿಶೇಷ ಮೀಸಲಾತಿ ಅಡಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಖಾತರಿಪಡಿಸಬೇಕು. ಈ ಭಾಗದ ಕೇಂದ್ರ ಸರ್ಕಾರಿ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು’ ಎಂದು ಕಾರ್ಯಕರ್ತರೊಂದಿಗೆ ಧರಣಿ ನಡೆಸಿ ಆಗ್ರಹಿಸಿದರು.

‘ಮಹಾದಾಯಿ ನದಿ ನೀರಿನ ಸಮಸ್ಯೆಯನ್ನು ಎರಡೂ ರಾಜ್ಯದ ಮುಖ್ಯಂಂತ್ರಿಗಳು ಪ್ರಧಾನಿಗಳ ಮಧ್ಯಸ್ಥಿಕೆಯಲ್ಲಿ ಪರಿಹರಿಸಲು ಮುಂದಾಗಬೇಕು. ಕಲಬುರಗಿ ಮತ್ತು ಬೆಳಗಾವಿ ಕಂದಾಯ ವಿಭಾಗದಲ್ಲಿ ದೆಹಲಿ ಏಮ್ಸ್ ಮಾದರಿಯಲ್ಲಿ ವಿಶೇಷ ಸವಲತ್ತಿನ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆ ಸ್ಥಾಪನೆ, ರಸಗೊಬ್ಬರ ಕಾರ್ಖಾನೆ, ಈ ವಲಯದ ನೈಸರ್ಗಿಕ ಸಂಪನ್ಮೂಲ ಬಳಕೆಗೆ ಅಕ್ಕಿ, ಗಿರಣಿ, ಕೈಮಗ್ಗ, ಸಿಮೆಂಟ್ ಕಾರ್ಖಾನೆ, ವೈನ್ ಯಾರ್ಡ್ ಸ್ಥಾಪಿಸಬೇಕು’ ಎಂದರು.

‘ರಾಜಕಾರಣಿಗಳ ಮಾಲೀಕತ್ವದ ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ಸರ್ಕಾರ ಈ ಭಾಗದಲ್ಲಿ ಐದು ಹೊಸ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ಸ್ಥಾಪಿಸಬೇಕು. ಕೇಂದ್ರ ಸರ್ಕಾರ ಕೃಷ್ಣಾ ನದಿ ನೀರಿನ ಸದ್ಭಳಕೆಗೆ ಎ ಸ್ಕಿಮ್ ಮತ್ತು ಬಿ ಸ್ಕೀಮ್ ನ ಯೋಜನೆಗಳಿಗೆ ವಿಶೇಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ತಿಪ್ಪಾರೆಡ್ಡಿ, ಕೆ.ಎಮ್.ಶಿವಕುಮಾರ, ಧನಂಜಯ ರೆಡ್ಡಿ, ಕೆ.ಶಿವಕುಮಾರ, ಸೂರ್ಯಪ್ರಕಾಶ, ಹನುಮರೆಡ್ಡಿ, ಅಮಾನ್, ಹುಸೇನ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !