ಹಳೆ ಪಿಂಚಣಿ ನೀತಿಗಾಗಿ ರಕ್ತದಾನ...!

6
ಹೊಸ ಪಿಂಚಣಿ ನೀತಿಗೆ ಎನ್‌ಪಿಎಸ್‌ ನೌಕರರ ವಿರೋಧ

ಹಳೆ ಪಿಂಚಣಿ ನೀತಿಗಾಗಿ ರಕ್ತದಾನ...!

Published:
Updated:
Deccan Herald

ಬಳ್ಳಾರಿ: ಹೊಸ ಪಿಂಚಣಿ ನೀತಿಯನ್ನು ವಿರೋಧಿಸಿ ಮತ್ತು ಹಳೇ ಪಿಂಚಣಿ ನೀತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಎನ್‌ಪಿಎಸ್‌ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ರಕ್ತದಾನ ಮಾಡಿ ವಿನೂತನ ಪ್ರತಿಭಟನೆಯನ್ನು ದಾಖಲಿಸಿದರು.

ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ನೂರಾರು ಸದಸ್ಯರು, ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷಣೆ ಕೂಗಿ ರಕ್ತದಾನ ಮಾಡಿದ್ದು ಗಮನ ಸೆಳೆಯಿತು.

ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ‘ಸರ್ಕಾರಿ ನೌಕರರಿಗೆ ಪಿಂಚಣಿ ಇಲ್ಲ ಎಂಬುದು ಕಹಿ ಸತ್ಯ. ಜನವರಿ 1, 2004 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 2006 ಏಪ್ರಿಲ್ 4 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿಯನ್ನು ರದ್ದು ಮಾಡಿ ಬದಲಾಗಿ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಅದರಿಂದ ನೌಕರರ ನಿವೃತ್ತ ಜೀವನ ಅತಂತ್ರವಾಗಲಿದೆ’ ಎಂದು ವಿಷಾದ ವ್ಯಕ್ತಡಿಸಿದರು.

‘ಹಳೇ ಪಿಂಚಣಿ ನೀತಿಗಾಗಿ ರಕ್ತವನ್ನಾದರೂ ಕೊಡುತ್ತೇವೆ ಎಂದು ನೌಕರರು ರಕ್ತದಾನ ಮಾಡುತ್ತಿರುವುದು ಶೋಚನೀಯ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.ಇನ್ನಾದರೂ ಸರ್ಕಾರಗಳು ಗಮನ ಹರಿಸಬೇಕು’ ಎಂದು ಸಂಘದ ಗೌರವ ಸಲಹೆಗಾರರಾದ ರಾಜಶೇಖರ ಗಾಣಿಗೇರ ಒತ್ತಾಯಿಸಿದರು.

ಸಂಘದ ಮುಖಂಡರಾದ ಶಿವಾಜಿರಾವ್, ಶಿವಲಿಂಗಪ್ಪ ಹಂದಿಹಾಳು, ಎನ್.ರಮೇಶ, ಜಿ.ವೈ.ತಿಪ್ಪಾರೆಡ್ಡಿ, ಎ.ಎಸ್.ಭೂಮೇಶ್ವರ, ಬಿ.ಜಿ.ಶಿವಾನಂದ, ಕೆ.ಹೊನ್ನೂರುಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !