ಹಂಪಿ ಹುಂಡಿಯಲ್ಲಿ ಹಳೆಯ ನೋಟುಗಳು!

7

ಹಂಪಿ ಹುಂಡಿಯಲ್ಲಿ ಹಳೆಯ ನೋಟುಗಳು!

Published:
Updated:
Deccan Herald

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ₨500, ₨1,000 ಮುಖಬೆಲೆಯ ಹಳೆಯ ನೋಟುಗಳು ಶನಿವಾರ ಪತ್ತೆಯಾಗಿವೆ.

ಐದು ನೂರು ಮುಖಬೆಲೆಯ ಹತ್ತು ನೋಟುಗಳು, ಸಾವಿರ ಮುಖಬೆಲೆಯ ಎರಡು ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿ ಹೋಗಿದ್ದಾರೆ. ₨10ರ ಒಂದು ಕಾಯಿನ್‌, ನಾಲ್ಕು ಡಾಲರ್‌ ಕೂಡ ಹಾಕಿದ್ದಾರೆ.

ಮಾರ್ಚ್‌ನಲ್ಲಿ ಹುಂಡಿ ಹಣ ಎಣಿಕೆ ವೇಳೆ ಎಂಟುವರೆ ಸಾವಿರ ಹಳೆಯ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳನ್ನು ರದ್ದುಪಡಿಸಿ ಎರಡು ವರ್ಷಗಳಾಗುತ್ತ ಬಂದರೂ ಭಕ್ತರು ಹುಂಡಿಯಲ್ಲಿ ಅವುಗಳನ್ನು ಹಾಕಿ ಹೋಗುವುದು ಮುಂದುವರಿದಿದೆ.

 
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !