ಶುಕ್ರವಾರ, ನವೆಂಬರ್ 22, 2019
20 °C

ಸಂಭ್ರಮದಿಂದ ಓಣಂ ಆಚರಣೆ

Published:
Updated:
Prajavani

ಹೊಸಪೇಟೆ: ಓಣಂ ಹಬ್ಬವನ್ನು ಕೇರಳ ಮೂಲದವರು ಭಾನುವಾರ ಇಲ್ಲಿ ಸಡಗರ, ಸಂಭ್ರಮದಿಂದ ಆಚರಿಸಿದರು.

ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ 300ಕ್ಕೂ ಅಧಿಕ ಮಲಯಾಳಿ ಕುಟುಂಬದವರು ಒಂದೆಡೆ ಸಮಾಗಮವಾಗಿ ಸಂಭ್ರಮದಲ್ಲಿ ಭಾಗಿಯಾದರು. ಸಾಂಪ್ರದಾಯಿಕ ಮಲಯಾಳಿ ನೃತ್ಯ, ಆಹಾರ ಉತ್ಸವ ಗಮನ ಸೆಳೆಯಿತು.

ಬೆಳಿಗ್ಗೆ ಪೂಜೆ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮಗಳು ಆರಂಭವಾದವು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೇರಂ, ಚೆಸ್‌, ಮ್ಯೂಸಿಕಲ್‌ ಚೇರ್‌, ಬಾಲ್‌ ಪಾಸಿಂಗ್‌, ಕಪ್ಪೆ ಓಟ ಸೇರಿದಂತೆ ಇತರೆ ಕ್ರೀಡೆಗಳು ನಡೆದವು. ನಂತರ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದವರನ್ನು ಸತ್ಕರಿಸಲಾಯಿತು.  ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಡಾ. ಮೃತ್ಯುಂಜಯ ಆರ್‌. ವಸ್ತ್ರದ, ಡಾ. ಬಿ.ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. 

ಕೈರಾಲಿ ಕಲ್ಚರಲ್‌ ಅಸೋಸಿಯೇಷನ್‌ ಅಧ್ಯಕ್ಷ ಎಂ.ಕೆ. ಮಥಾಯಿ, ಉಪಾಧ್ಯಕ್ಷ ಸಿಲ್ವಿ ಜಾರ್ಜ್‌, ಪ್ರಧಾನ ಕಾರ್ಯದರ್ಶಿ ಸುಂದರನ್‌, ಕೆ. ಮನೋಹರನ್‌ ಪಿಳ್ಳೈ ಇದ್ದರು.

ಪ್ರತಿಕ್ರಿಯಿಸಿ (+)