ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ನಲ್ಲಿ ಸಹಕಾರಿ ಬ್ಯಾಂಕಿನ ಪರೀಕ್ಷೆ

Last Updated 23 ಜೂನ್ 2019, 15:47 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ವಿಕಾಸ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌ ಭಾನುವಾರ ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್‌ ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆ ನಡೆಸಿತು.

28 ಹುದ್ದೆಗಳಿಗೆ ಒಟ್ಟು 640 ಯುವಕ/ಯುವತಿಯರು ಮೊಬೈಲ್‌ನಲ್ಲಿ ಪರೀಕ್ಷೆ ಎದುರಿಸಿದರು. ಬೆಂಗಳೂರಿನ ‘ಕೋಡ್‌ ಗ್ರೌಂಡ್‌‘ ಸಂಸ್ಥೆಯ ತಾಂತ್ರಿಕ ಸಹಯೋಗದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಬ್ಯಾಂಕಿಂಗ್‌, ಸಾಮಾನ್ಯ ಜ್ಞಾನ, ಸಹಕಾರ, ಕನ್ನಡ ಸೇರಿದಂತೆ ಏಳು ವಿಭಾಗಗಳಲ್ಲಿ ಒಟ್ಟು 125 ಪ್ರಶ್ನೆಗಳಿಗೆ 75 ನಿಮಿಷ ಸಮಯ ನಿಗದಿಪಡಿಸಲಾಗಿತ್ತು. ಪರೀಕ್ಷೆ ಎದುರಿಸಿದ ಕೆಲವೇ ನಿಮಿಷಗಳಲ್ಲಿ ವಿದ್ಯಾರ್ಥಿಗಳ ಅವರ ಮೊಬೈಲ್‌ಗಳಲ್ಲಿಯೇ ಪಡೆದ ಅಂಕಗಳ ಮಾಹಿತಿ ಪಡೆದರು.

‘ನೇಮಕಾತಿ ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಸ್ಮಾರ್ಟ್‌ಫೋನ್‌ನಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದೇವೆ. ಭವಿಷ್ಯದಲ್ಲಿ ನೇಮಕ ಪ್ರಕ್ರಿಯೆ ಇದೇ ರೀತಿ ನಡೆಯಲಿದೆ‘ ಎಂದುಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.

ಪ್ರಾದೇಶಿಕ ಸಹಕಾರಿ ತರಬೇತಿ ಕೇಂದ್ರದ ನಿವೃತ್ತ ನಿರ್ದೇಶಕ ಎಸ್. ಎ. ಸಿದ್ಧಾಂತಿ,ಬ್ಯಾಂಕಿನ ತಾಂತ್ರಿಕ ಸಲಹೆಗಾರ ಎಸ್. ಜಿ. ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT