ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬ್ರಾಹ್ಮಣ ದಂಪತಿಯಿಂದ ಪಾದಪೂಜೆ

7

ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬ್ರಾಹ್ಮಣ ದಂಪತಿಯಿಂದ ಪಾದಪೂಜೆ

Published:
Updated:
Deccan Herald

ಬಳ್ಳಾರಿ: ನಗರಕ್ಕೆ ಭಾನುವಾರ ಭೇಟಿ ನೀಡಿದ್ದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ತಮ್ಮ ಮನೆಗೆ ಕರೆದೊಯ್ದ ವಕೀಲ ಸತ್ಯಮೂರ್ತಿ ಮತ್ತು ವಿಜಯಲಕ್ಷ್ಮಿ ದಂಪತಿ ಶ್ರೀಗಳಿಗೆ ಪಾದ ಪೂಜೆ ಮಾಡಿದರು.

ನಗರದ ವಿಶಾಲ ನಗರದಲ್ಲಿರುವ ಎಬಿವಿಪಿ ವಿದ್ಯಾರ್ಥಿ ಸೇವಾ ಸಮಿತಿಯ ವಿದ್ಯಾರ್ಥಿ ಸೌಧದಲ್ಲಿ ಜ್ಞಾನಯೋಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಾರ್ವಜನಿಕ ವಾಚನಾಲಯವನ್ನು ಸ್ವಾಮೀಜಿ ಉದ್ಘಾಟಿಸಿದ್ದರು. ನಂತರ ಬಿಪಿಎಸ್‌ಸಿ ಶಾಲೆಯಲ್ಲಿ ಕಾರ್ಯಕ್ರಮ ನಡೆದಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಸ್ವಾಮೀಜಿಯನ್ನು ತಮ್ಮ ಮನೆಗೆ ಕರೆದೊಯ್ದ ದಂಪತಿ ಪಾದಪೂಜೆ ಮಾಡಿದರು. ಅವರೊಂದಿಗೆ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಸುರೇಶ್‌, ಬಿ.ಬಸವರಾಜ್‌, ಜಯತೀರ್ಥ ಎಬಿವಿಪಿ ವಿದ್ಯಾರ್ಥಿ ಸೇವಾ ಸಮಿತಿಯ ಅಧ್ಯಕ್ಷ ಹರಿಕುಮಾರ್‌ ಕೂಡ ಸ್ವಾಮೀಜಿಯ ಕಾಲಿಗೆರಗಿದರು.

ಬ್ರಾಹ್ಮಣ ಸಮಾಜದ ಈ ದಂಪತಿ ಸ್ವಾಮೀಜಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿ ಗಮನಸೆಳೆಯಿತು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !