ಶನಿವಾರ, ಡಿಸೆಂಬರ್ 7, 2019
25 °C

ಚಿತ್ರಕಲೆ ಮುಖೇನ ಪರಿಸರ ಜಾಗೃತಿ

Shashikanth S Shembelli Updated:

ಅಕ್ಷರ ಗಾತ್ರ : | |

ಹೊಸಪೇಟೆಯ ಬಲ್ದೋಟ ಉದ್ಯಾನದಲ್ಲಿ ಭಾನುವಾರ ಚಿತ್ರಕಲೆ ಬಿಡಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಹೊಸಪೇಟೆ: ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭ ಇಲ್ಲಿನ ಎಂ.ಜೆ. ನಗರದ ಬಲ್ದೋಟ ಉದ್ಯಾನದಲ್ಲಿ ಭಾನುವಾರ ನಡೆಯಿತು.

‘ಎಲ್ಲರ ಚಿತ್ತ ಹಸಿರಿನತ್ತ, ಪರಿಸರ ಉಳಿಸಿ ವಿಶ್ವ ಬೆಳೆಸಿ, ಹಸಿರೆ ಉಸಿರು’ ಶೀರ್ಷಿಕೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು. ಕಾಲೇಜಿನ 245 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌, ಡಿ.ಎ.ವಿ. ಶಾಲೆಯ ಮುಖ್ಯಶಿಕ್ಷಕ ಟಿ.ಸುಧಾಕರ್, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಪಿ.ವೆಂಕಟೇಶ್, ಭಾರತ ಭಾವೈಕ್ಯೆತಾ ಸಮಿತಿ ಅಧ್ಯಕ್ಷ ಲೋಹಿತ್, ಗುಜ್ಜಲ ಗಣೇಶ್, ಮೃತ್ಯುಂಜಯ ನಗರ ಹಿರಿಯ ನಾಗರಿಕ ವೇದಿಕೆಯ ಒ.ಎಂ.ಮಲ್ಲಿಕಾರ್ಜುನ್, ಕುಮಾರಸ್ವಾಮಿ, ಉಮಾಪತಿ, ದೇವದಾಸ್, ಆನಂದ್, ಅನಂತ ಜೋಶಿ, ಅರ್ಜುನ್ ದೊಡವಾಡ, ವಿಕಾಸ ಯುವಕ ಮಂಡಳದ ಅಧ್ಯಕ್ಷ ಗೋಸಲ ಬಸವರಾಜ್ ಇದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು