ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮನೆಯಲ್ಲಿ‌ ಪೆಟ್ರೋಲ್ ಸಂಗ್ರಹ, ವಿಮ್ಸ್ ಅಧೀಕ್ಷಕರ ಮನೆಯಲ್ಲಿ ಸ್ಫೋಟ

Last Updated 21 ಮಾರ್ಚ್ 2020, 6:58 IST
ಅಕ್ಷರ ಗಾತ್ರ

ಬಳ್ಳಾರಿ: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಪೆಟ್ರೋಲ್‌ಗೆ ಬೆಂಕಿ ತಗುಲಿ ಏರ್ಪಟ್ಟ ಸ್ಫೋಟದಿಂದ ಇಲ್ಲಿನ ವಿಮ್ಸ್ ವೈದ್ಯಕೀಯ ಅಧೀಕ್ಷಕ‌ರ ಕಚೇರಿಯ ಅಧೀಕ್ಷಕ ವೆಂಕಣ್ಣ, ಅವರ ಪತ್ನಿ ಹಾಗೂ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಧೀಕ್ಷಕರ ಮನೆಯಲ್ಲಿ ದುರ್ಘಟನೆ ರಾತ್ರಿ 10.30 ರ ವೇಳೆಯಲ್ಲಿ‌ ನಡೆದಿದೆ. ಅವರು ಮನೆಯಲ್ಲಿ‌ ಪೆಟ್ರೋಲ್ ಸಂಗ್ರಹಿಸಿಟ್ಟಿದ್ದರು ಎಂದು ತಿಳಿದು ಬಂದಿದೆ.

ವೆಂಕಣ್ಣ ಅವರ ದೇಹ ಬಹುತೇಕ ಸುಟ್ಟಿದ್ದು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪತ್ನಿ ಮತ್ತು ಮಗಳು ಜೀವಾಪಾಯದಿಂದ ಪಾರಾಗಿದ್ದು, ವಿಮ್ಸ್ನ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಮರಿರಾಜ ಜೀರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT