ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಸಂರಕ್ಷಿಸುವ ತುರ್ತು’

Last Updated 14 ಜುಲೈ 2019, 13:49 IST
ಅಕ್ಷರ ಗಾತ್ರ

ಹೊಸಪೇಟೆ: ಸಸಿ ನೆಡುವ ಹಾಗೂ ವಿತರಣೆ ಕಾರ್ಯಕ್ರಮ ಭಾನುವಾರ ಇಲ್ಲಿನ ಬಿ.ಟಿ.ಆರ್‌. ನಗರದಲ್ಲಿ ಜರುಗಿತು.

ನಾಗರಿಕ ಹಿತರಕ್ಷಣಾ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಕಾಸೆಟ್ಟಿ ಉಮಾಪತಿ ಸಸಿ ನೆಟ್ಟು, ವಿತರಿಸಿ, ‘ಪರಿಸರವನ್ನು ಎಂದಿಗಿಂತಲೂ ಇಂದು ಸಂರಕ್ಷಣೆ ಮಾಡುವ ತುರ್ತು ಇದೆ. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾದರೆ ಮಳೆ ಬರುತ್ತದೆ. ಇಲ್ಲವಾದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಸಸಿಗಳನ್ನು ವಿತರಿಸುತ್ತಿದ್ದೇನೆ. ಈ ಕೆಲಸ ನಿರಂತರವಾಗಿ ಮುಂದುವರೆಯಲಿದೆ. ಸಸಿ ಅಗತ್ಯವಿದ್ದವರು ಬಂದು ಉಚಿತವಾಗಿ ಪಡೆಯಬಹುದು’ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಎನ್‌. ರಾಘವೇಂದ್ರ, ‘ಪರಿಸರ ನಾಶ ಮಾಡುತ್ತಿರುವ ಕಾರಣ ಜಾಗತಿಕ ತಾಪಮಾನ ಹೆಚ್ಚಳವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಹಸಿರೀಕರಣಕ್ಕೆ ಒತ್ತು ಕೊಡಬೇಕು. ಎಲ್ಲರೂ ಕನಿಷ್ಠ ಒಂದು ಸಸಿಯಾದರೂ ನೆಡಬೇಕು’ ಎಂದು ತಿಳಿಸಿದರು.

ಬಿ.ಟಿ.ಆರ್.ನಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮುತ್ತುರಾಜ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಾಮಕೃಷ್ಣ, ಸೇವಾ ಪ್ರತಿನಿಧಿ ಉಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT