ಭಾನುವಾರ, ಡಿಸೆಂಬರ್ 15, 2019
24 °C
ಜಿಲ್ಲಾ ಪೊಲೀಸರ ‌ಕ್ರೀಡಾಕೂಟ

1,500 ಮೀಟರ್ ಓಟ: ಆನಂದ್‌ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಜಿಲ್ಲಾ ಮಟ್ಟದ ಪೊಲೀಸರ ಕ್ರೀಡಾಕೂಟದ 1,500 ಓಟದ ಸ್ಪರ್ಧೆಯಲ್ಲಿ ಪಡೆಯ ಕಾನ್‌ಸ್ಟೆಬಲ್‌ ಆನಂದ ಮೊದಲು ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದರು. ಗಾಂಧೀನಗರ ಠಾಣೆಯ ಕಾನ್‌ಸ್ಟೆಬಲ್‌ ರಾಜು ದ್ವಿತೀಯ ಹಾಗೂ ಪಡೆಯ ಕಾನ್‌ಸ್ಟೆಬಲ್‌ ನವೀನ್‌ ಮೂರನೇ ಸ್ಥಾನ ಪಡೆದರು.

ಶಿಸ್ತಿಗೆ ಹೆಸರು: ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಎಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸರು ಮಾತ್ರ ಶಿಸ್ತು ಉಳಿಸಿಕೊಂಡಿದ್ದಾರೆ. ಸಮವಸ್ತ್ರ ಸೇರಿ ಎಲ್ಲಾ ವಿಚಾರಗಳಲ್ಲಿ ಶಿಸ್ತುಳ್ಳ ಕಾರ್ಯವೈಖರಿ ಅನುಕರಣೀಯ. ಸಾಮಾಜಿಕ ಬದಲಾವಣೆಯ ಸಂದರ್ಭದಲ್ಲಿ ಶಿಸ್ತಿನ ಕೊರತೆಯನ್ನು ನೀಗಿಸಲು ಪೊಲೀಸರ ಕೆಲಸ ಮಹತ್ವವಾದದ್ದು’ ‌ಎಂದರು.

'ಕಾನೂನು ಸಮಸ್ಯೆ, ರಜೆ ಕೊರತೆಯಂಥ ಸಮಸ್ಯೆಗಳಿದ್ದರೂ ಪೊಲೀಸರು ಕೆಲಸ ನಿರಂತರ ನಿರ್ವಹಿಸುತ್ತಾರೆ‌. ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ಮುಕ್ತರಾಗಲು ಕ್ರೀಡಾಕೂಟದ ಅವಶ್ಯಕತೆ ಇದೆ’ ಎಂದರು.

‘ಇಲಾಖೆಗಳ ನಡುವೆ ಸಮನ್ವಯ ಬಹಳ ಮುಖ್ಯ. ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡಲು ಪೊಲೀಸರ ಸಹಕಾರವೂ ಹೆಚ್ಚಿದೆ’ ಎಂದರು. 

ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಎಸಿಬಿ ಎಸ್ಪಿ ಪ್ರಸನ್ನ ದೇಸಾಯಿ ಇದ್ದರು‌.

ಪ್ರತಿಕ್ರಿಯಿಸಿ (+)