ಮೂರೇ ತಿಂಗಳಲ್ಲಿ ಬಾಯ್ತೆರೆದ ರಸ್ತೆ!

7

ಮೂರೇ ತಿಂಗಳಲ್ಲಿ ಬಾಯ್ತೆರೆದ ರಸ್ತೆ!

Published:
Updated:
Deccan Herald

ಹೊಸಪೇಟೆ: ಇಲ್ಲಿನ ಪಟೇಲ್‌ ನಗರದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ನಿರ್ಮಿಸಿದ್ದ ಸಿ.ಸಿ. ರಸ್ತೆ ಬಾಯ್ತೆರೆದಿದೆ. ಗುಣಮಟ್ಟದ ಕಾಮಗಾರಿ ಅಂದರೆ ಇದೇ ಇರಬಹುದೇನೋ ಎಂದು ಅನಿಸುತ್ತಿದೆ.

ಮತ್ತೊಂದು ವಿಶೇಷವೆಂದರೆ ಈ ರಸ್ತೆ ಇರುವುದು ಇತ್ತೀಚೆಗಷ್ಟೇ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ. ನಾಗಲಕ್ಷ್ಮಮ್ಮ ಅವರ ಮನೆ ಮುಂದೆ. ಅವರ ಕಾಲದಲ್ಲೇ ಈ ರಸ್ತೆ ನಿರ್ಮಿಸಲಾಗಿತ್ತು. ಅವರ ಮನೆಯಿಂದ ಕೂಗಳತೆ ದೂರದಲ್ಲಿಯೇ ರಸ್ತೆಯ ಒಂದು ಭಾಗ ಬಾಯ್ತೆರೆದುಕೊಂಡಿದೆ. ಇದೇ ಭಾಗದಲ್ಲಿ ಅವರ ಮನೆ ಮಂದಿಯೆಲ್ಲ ಓಡಾಡುತ್ತಾರೆ. ಇದೇ ರಸ್ತೆಯಲ್ಲಿ ಶಾಸಕ ಆನಂದ್‌ ಸಿಂಗ್‌ ಅವರ ಕಚೇರಿ ಕೂಡ ಇದೆ. ಆಗಾಗ ನಡೆಯುವ ಕಾರ್ಯಕ್ರಮಗಳಲ್ಲಿ ಅವರೂ ಭಾಗವಹಿಸುತ್ತಿರುತ್ತಾರೆ. ಕಾಮಗಾರಿ ಕಳಪೆಯಾಗಿದ್ದರೂ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಜತೆಗೆ ಹಾಳಾಗಿರುವ ರಸ್ತೆ ದುರಸ್ತಿಗೂ ಮುಂದಾಗಿಲ್ಲ. ಇಂತಹ ಜನಪ್ರತಿನಿಧಿಗಳು ನಿಜಕ್ಕೂ ನಮಗೆ ಬೇಕೇ ಎಂಬ ಪ್ರಶ್ನೆ ಕಾಡುತ್ತಿದೆ.

ಜನರ ತೆರಿಗೆ ಹಣದಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಹಣ ಹೊಡೆಯಲು ಕಳಪೆ ಕಾಮಗಾರಿ ಮಾಡುತ್ತಾರೆ. ಇದರಿಂದ ಯಾವುದೇ ಕೆಲಸಗಳು ಸರಿಯಾಗಿ ಆಗುವುದಿಲ್ಲ. ಮಾಡಿದ ಕೆಲಸವೇ ಪುನಃ ಪುನಃ ಮಾಡಿ ಹಣ ಗುಳುಂ ಮಾಡುತ್ತಾರೆ. ಉನ್ನತ ಅಧಿಕಾರಿಗಳು ಈ ಕಡೆ ಗಮನಹರಿಸಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಹಣ ಹೀಗೆ ಹಾಳಾಗುತ್ತ ಹೋಗುತ್ತದೆ. 
ಸುರೇಶ್‌, ಬಸವರಾಜ, ರಾಜು, ಶಫಿ, ರಾಮಚಂದ್ರ, ಸ್ಥಳೀಯ ನಿವಾಸಿಗಳು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !