ಶನಿವಾರ, ಅಕ್ಟೋಬರ್ 24, 2020
28 °C

ಪ್ರಜಾವಾಣಿ ವರದಿ ಫಲಶ್ರುತಿ: ವಿರೂಪಾಕ್ಷ ಗೋಪುರಕ್ಕೆ ಬಂತು ಬೆಳಕು

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹೊಸ ವಿದ್ಯುದ್ದೀಪ ಅಳವಡಿಸಿದ್ದರಿಂದ ಈ ಭಾಗದ ಆರಾಧ್ಯ ದೈವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ ಬೆಳಕಿನಿಂದ ಕಂಗೊಳಿಸುತ್ತಿದೆ.

‘ಕತ್ತಲಲ್ಲಿ ಹಂಪಿ ವಿರೂಪಾಕ್ಷ ಗೋಪುರ’ ಶೀರ್ಷಿಕೆ ಅಡಿ ಶುಕ್ರವಾರ (ಅ.9) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ಅವರು, ಶುಕ್ರವಾರ ಹೊಸ ವಿದ್ಯುದ್ದೀಪಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಗೋಪುರದ ತುತ್ತ ತುದಿಯಲ್ಲಿ ಸದಾ ಉರಿಯುವ ವಿದ್ಯುದ್ದೀಪ ನೋಡಿ ಸುತ್ತಲಿನ ಅನೇಕ ಗ್ರಾಮಸ್ಥರು ಸಂಜೆಯಾದೊಡನೆ ಕೈಮುಗಿಯುವ ಪರಂಪರೆ ಇದೆ. ಆದರೆ, ತಿಂಗಳ ಹಿಂದೆ ವಿದ್ಯುದ್ದೀಪ ಕೆಟ್ಟು ಹೋಗಿ ಗೋಪುರದ ಮೇಲೆ ಕತ್ತಲು ಆವರಿಸಿಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು