ಇಂಧನ ದರ ಏರಿಕೆ: ಬಂದ್‌ಗೆ ಕಾಂಗ್ರೆಸ್‌ ಸಿದ್ಧತೆ– ಸಂಘಟನೆಗಳ ಬೆಂಬಲ

7

ಇಂಧನ ದರ ಏರಿಕೆ: ಬಂದ್‌ಗೆ ಕಾಂಗ್ರೆಸ್‌ ಸಿದ್ಧತೆ– ಸಂಘಟನೆಗಳ ಬೆಂಬಲ

Published:
Updated:

ಬಳ್ಳಾರಿ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಸೆ.10ರಂದು ದೇಶವ್ಯಾಪಿ ಬಂದ್‌ಗೆ ಕರೆ ಕೊಟ್ಟಿರುವ ಮೇರೆಗೆ, ಜಿಲ್ಲೆಯಲ್ಲಿ ವಿವಿಧ ಪಕ್ಷದ ಮುಖಂಡರು ಕಾರ್ಯಾಚರಣೆಯನ್ನು ರೂಪಿಸಲಿದ್ದಾರೆ. ಹಲವು ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ಬಂದ್‌ ಯಶಸ್ವಿಯಾಗಿ ನಡೆಯುವ ಸಾಧ್ಯತೆ ಇದೆ.

ಅತೀವ ಬೆಲೆ ಏರಿಕೆ: ನಗರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್, ‘ದೇಶದಲ್ಲಿ ಪೆಟ್ರೋಲ್ ದರ ಲೀಟರಿಗೆ ₨ 100 ದಾಟಬಹುದು ಎಂಬ ಆತಂಕ ಎದುರಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಇಷ್ಟೊಂದು ಏರಿಕೆಯಾಗಿರಲಿಲ್ಲ’ ಎಂದು ಪ್ರತಿಪಾದಿಸಿದರು.

‘ಇಂಧನ ದರದ ಜೊತೆಗೆ ಅಗತ್ಯ ವಸ್ತುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ದೇಶದಲ್ಲಿ ಬಡವರು ಉಪವಾಸ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳಿಂದ ರಾಜ್ಯದಲ್ಲಿ ಅಂಥ ಪರಿಸ್ಥಿತಿ ಇಲ್ಲ’ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

ರಜೆ ಘೋಷಣೆ
ಬಂದ್‌ ಕರೆಯೆ ಮೇರೆಗೆ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನೂ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಈ ನಡುವೆ ಕೆಲವು ಖಾಸಗಿ ಶಾಲೆಗಳು ರಜೆಯನ್ನು ಘೋಷಿಸಿ ಪೋಷಕರಿಗೆ ಸಂದೇಶ ರವಾನಿಸಿವೆ. ಹಲವು ಶಾಲೆಗಳ ಆಡಳಿತ ಮಂಡಳಿ ಪ್ರಮುಖರು ಜಿಲ್ಲಾಧಿಕಾರಿಯ ನಿರ್ಧಾರಕ್ಕೆ ಕಾಯುತ್ತಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !