ಆಸ್ಪತ್ರೆಯಿಂದ ಕೈದಿ ಪರಾರಿ

7

ಆಸ್ಪತ್ರೆಯಿಂದ ಕೈದಿ ಪರಾರಿ

Published:
Updated:

ಬಳ್ಳಾರಿ: ಅಪೆಂಡಿಸೈಟಿಸ್‌ ಶಸ್ತ್ರಚಿಕಿತ್ಸೆ ಸಲುವಾಗಿ ಆರೋಗ್ಯ ತಪಾಸಣೆಗೆಂದು ಇಲ್ಲಿನ ಕೇಂದ್ರ ಕಾರಾಗೃಹದಿಂದ ಕರೆದೊಯ್ಯಲಾಗಿದ್ದ ಕೈದಿ ಸಂಜಯ್‌ ಅಲಿಯಾಸ್‌ ಕೃಷ್ಣನಾಯಕ್‌ ವಿಮ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಪೊಲಿಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

ಕ್ಷಯ ರೋಗಿಯಾಗಿರುವ ಆತನಿಗೆ ಬೆಂಗಳೂರಿನ ರಾಜೀವಗಾಂಧಿ ಕ್ಷಯರೋಗ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಕೊಡಿಸಿ, ಆ.11ರಂದು ವಾಪಸು ಕರೆತರಲಾಗಿತ್ತು. ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ ಕೊಡಿಸುವಂತೆ ಅಲ್ಲಿನ ವೈದ್ಯರು ನೀಡಿದ್ದ ಶಿಫಾರಸಿನ ಮೇರೆಗೆ ಆತನನ್ನು ವಿಮ್ಸ್‌ ಆಸ್ಪತ್ರೆಗೆ ಸಂಜೆ 4ರ ವೇಳೆಗೆ ಕರೆದೊಯ್ಯಲಾಗಿತ್ತು.

ಆರೋಗ್ಯ ತಪಾಸಣೆ ಬಳಿಕ ವರದಿ ಪಡೆಯಲು ಭದ್ರತಾ ಪೊಲೀಸರು ವೈದ್ಯರನ್ನು ಸಂಪರ್ಕಿಸುವ ಯತ್ನದಲ್ಲಿದ್ದಾಗ ಆತ ಅವರ ಪೊಲೀಸರ ಕಣ್ತಪ್ಪಿಸಿ ರಾತ್ರಿ 7. 45ರ ವೇಳೆಗೆ ಪರಾರಿಯಾದ ಎಂದು ಕೌಲ್‌ಬಜಾರ್‌ ಠಾಣೆಯ ಪೊಲೀಸರು ತಿಳಿಸಿದರು.

ಮಂಗಳೂರಿನಲ್ಲಿ 2004ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮೈಸೂರು ಮೂಲದ ಕೈದಿ 2007ರಲ್ಲಿ ಪೆರೋಲ್‌ ಮೇಲೆ ತೆರಳಿದ್ದ ಸಂದರ್ಭದಲ್ಲೂ ತಲೆಮರೆಸಿಕೊಂಡಿದ್ದ. 2016ರಲ್ಲಿ ಬೆಂಗಳೂರಿನಲ್ಲಿ ಪತ್ತೆಯಾದ ಬಳಿಕ ಬಳ್ಳಾರಿ ಕಾರಾಗೃಹಕ್ಕೆ ರವಾನಿಸಲಾಗಿತ್ತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !