‘ಬಹುತ್ವ ಗೌರವಿಸುವ ವಾತಾವರಣ ಬರಲಿ’

7

‘ಬಹುತ್ವ ಗೌರವಿಸುವ ವಾತಾವರಣ ಬರಲಿ’

Published:
Updated:
Deccan Herald

ಹೊಸಪೇಟೆ: ಸ್ವಾತಂತ್ರ್ಯ ಹೋರಾಟ ಪರಂಪರೆ ಮತ್ತು ಆಶಯಗಳ ಉಳಿವಿಗೆ, ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ‘ಸ್ವಾತಂತ್ರ್ಯೋತ್ಸವ–ಸತ್ಯಾಗ್ರಹ’ ಹೆಸರಿನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ರಾತ್ರಿ ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಸಾಮೂಹಿಕ ಜಾಗರಣೆ ಮಾಡಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಎಂ. ಜಂಬಯ್ಯ ನಾಯಕ ಮಾತನಾಡಿ, ‘ಎಲ್ಲರೂ ಸೌಹಾರ್ದತೆಯಿಂದ ಬಾಳಿ, ಬದುಕುವುದರ ಜತೆಗೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂಬ ಆಶಯದೊಂದಿಗೆ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿದ್ದೇವೆ. ಆದರೆ, ಇಂದು ಅಧಿಕಾರ ನಡೆಸುತ್ತಿರುವ ಸರ್ಕಾರಗಳು ಆ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಉಳ್ಳವರ ಪರ ನಿಂತಿವೆ’ ಎಂದು ಆರೋಪಿಸಿದರು.

‘ಬಹುತ್ವವನ್ನು ಗೌರವಿಸುವ ವಾತಾವರಣ ಸೃಷ್ಟಿಯಾಗಬೇಕು. ದುಡಿಯುವ ಜನರ ಹಕ್ಕುಗಳನ್ನು ಸಂರಕ್ಷಿಸಲು ಸರ್ಕಾರ ಮೊದಲ ಆದ್ಯತೆ ನೀಡಬೇಕು. ಆಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದರು.

ಬಳಿಕ ಕವಿಗೋಷ್ಠಿ, ಸಂಗೀತ ಸಾಮರಸ್ಯ, ಭಜನಾ ಕಾರ್ಯಕ್ರಮ ನಡೆಯಿತು. ಬುಧವಾರ ಬೆಳಿಗ್ಗೆ ವರೆಗೆ ಜಾಗರಣೆ ನಡೆಯಲಿದ್ದು, ನಂತರ ರಾಷ್ಟ್ರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

ಮುಖಂಡರಾದ ಎ. ಕರುಣಾನಿಧಿ, ರಮೇಶ, ಗೋಪಾಲ್‌, ಎಂ. ಭಾಸ್ಕರ್‌ ರೆಡ್ಡಿ, ನಾಗರತ್ನಮ್ಮ, ಅಂಜಲಿ ಬೆಳಗಲ್‌, ಸಿ.ಐ.ಟಿ.ಯು., ದೇವದಾಸಿ ಮಹಿಳಾ ವಿಮೋಚನಾ ಸಂಘ, ಹೊರಗುತ್ತಿಗೆ ನೌಕರರ ಸಂಘ, ಹಮಾಲರ ಫೆಡರೇಶನ್‌, ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !