ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳುಪೇಟೆ, ಗುಂಡಿಪೇಟೆ ಹೆಸರಿಡಲು ಆಗ್ರಹ

Last Updated 7 ಜನವರಿ 2019, 12:32 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಎಲ್ಲೆಡೆ ದೂಳು ಆವರಿಸಿಕೊಂಡಿದೆ. ಹೀಗಾಗಿ ನಗರಕ್ಕೆ ಗುಂಡಿಪೇಟೆ ಅಥವಾ ದೂಳುಪೇಟೆ ಎಂಬ ಹೆಸರಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ನಗರದ ಮುಖ್ಯರಸ್ತೆ, ಉಪರಸ್ತೆಗಳನ್ನು ಬೇಕಾಬಿಟ್ಟಿ ಅಗೆದು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಎಲ್ಲೆಡೆ ಗುಂಡಿಗಳು ಬಿದ್ದಿವೆ. ಸದಾ ದೂಳು ಆವರಿಸಿಕೊಂಡಿರುತ್ತಿದೆ. ಇದರಿಂದ ಜನರ ನೆಮ್ಮದಿಗೆ ಭಂಗ ಉಂಟಾಗಿದೆ.ಹೀಗಾಗಿ ನಗರಕ್ಕೆ ಗುಂಡಿಪೇಟೆ ಅಥವಾ ದೂಳುಪೇಟೆ ಎಂಬ ಹೆಸರಿಡುವುದು ಸೂಕ್ತ’ ಎಂದು ಮನವಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.

‘ಗುಂಡಿಗಳಿಂದ ನಿತ್ಯ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ದೂಳಿನಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಯಾವ ಕೆಲಸವೂ ನಿಗದಿತ ಅವಧಿಯೊಳಗೆ ಮುಗಿದಿಲ್ಲ. ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ಎಲ್ಲ ಗುಂಡಿಗಳನ್ನು ಮುಚ್ಚಿ, ದೂಳಿನಿಂದ ಮುಕ್ತಿ ಕೊಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ವೇದಿಕೆಯ ತಾಲ್ಲೂಕು ಅಧ್ಯಕ್ಷ ಟಿ. ಹನುಮಂತಪ್ಪ ಶ್ರೀನಿವಾಸ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಫರ್‌, ಮುಖಂಡರಾದ ಬಿ.ವಿರೂಪಾಕ್ಷ, ಮಂಜು, ಅಮೀರ್, ಫಿರೋಜ್, ಅಬ್ದುಲ್ ಹಮೀದ್, ಶಂಷುದ್ದೀನ್, ರಾಘು, ದೊರೆ, ಕೊಟ್ರೇಶ್, ಟಿಪ್ಪು, ಲಕ್ಷ್ಮಿ, ಸುವರ್ಣ, ರಂಗಮ್ಮ, ಶಕುಂತಲ, ಎಸ್.ಮಾಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT