ಶುಕ್ರವಾರ, ಜೂನ್ 18, 2021
24 °C
ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಬೇಡ

ಸಣ್ಣ ವ್ಯಾಪಾರಸ್ಥರನ್ನು ರಕ್ಷಿಸಿ: ವಿತರಕರ ಸಂಘದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ದೇಶದ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆಸ್ಪದ ನೀಡದೆ ಸಣ್ಣ ವ್ಯಾಪಾರಸ್ಥರನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಿತರಕರ ಸಂಘದ ಮುಖಂಡರು ನಗರದಲ್ಲಿ ಶುಕ್ರವಾರ ಮೆರವಣಿಗೆ, ಧರಣಿ ನಡೆಸಿದರು.

‘ದೇಶದಲ್ಲಿ ಸುಮಾರು ಏಳು ಕೋಟಿ ಸಣ್ಣ ವ್ಯಾಪಾರಸ್ಥರಿದ್ದು, ಉದ್ಯೋಗ ಸೃಜನೆಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ₨ 42 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಸರಕು ಸೇವಾ ತೆರಿಗೆಯ ಅತಿ ಹೆಚ್ಚು ಪಾಲುದಾರರಾಗಿರುವ ಈ ವ್ಯಾಪಾರಸ್ಥರಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಯು ನುಂಗಲಾಗದ ತುತ್ತಾಗಿದೆ’ ಎಂದು ಸಂಘದ ಅಧ್ಯಕ್ಷ ಕಿಶೋರ್‌ ಬಾಬು ದೂರಿದರು.

‘ವಾಲ್‌ಮಾರ್ಟ್‌ ಮತ್ತು ಫ್ಲಿಪ್‌ಕಾರ್ಟ್‌ ನಡುವೆ ಏರ್ಪಟ್ಟ ಒಪ್ಪಂದವು ಸಣ್ಣ ವ್ಯಾಪಾರಸ್ಥರ ಜೀವನಕ್ಕೆ ಮುಳುವಾಗುವುದರಿಂದ ಕೂಡಲೇ ರದ್ದುಪಡಿಸಬೇಕು. ಜಿಎಸ್‌ಟಿಯಲ್ಲಿ ಎರಡು ಬಗೆಯ ತೆರಿಗೆಗಳನ್ನು ಮಾತ್ರ ನಿಗದಿ ಮಾಡಬೇಕು. ದಂಡ ಶುಲ್ಕವನ್ನು ₨ 10 ಸಾವಿರಕ್ಕಿಂತ ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ವಿತರಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ರಾಷ್ಟ್ರಮಟ್ಟದಲ್ಲಿ ಸಣ್ಣ ವ್ಯಾಪಾರಕ್ಕೆ ಪ್ರತ್ಯೇಕ ಸಚಿವಾಲಯವನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಪ್ರಮುಖರಾದ ಶಫೀಕ್‌ ಅಹ್ಮದ್‌, ಗುರುಪ್ರಸಾದ್‌, ಗಿರಿರಾಜ್‌, ಎರ್ರಿಸ್ವಾಮಿ, ಚಂದ್ರಾ ರೆಡ್ಡಿ, ಸಂತೋಷ್‌ಕುಮಾರ್‌, ಮುಖ್ತರ್‌ ಅಹ್ಮದ್‌ ಪಾಲ್ಗೊಂಡಿದ್ದರು. ನಗರದ ಎಚ್‌.ಆರ್‌.ಗವಿಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿತರಕರು ಅಲ್ಲಿ ಕೆಲ ಕಾಲ ಧರಣಿ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು