ಬಳ್ಳಾರಿ: ಕಲಾವಿದರ ಮಾಸಾಶನಕ್ಕೆ ‌ಆಗ್ರಹ; ಭಜನೆ ಮಂದಿರವಾದ ‌ಡಿ.ಸಿ ಕಚೇರಿ ಆವರಣ

7

ಬಳ್ಳಾರಿ: ಕಲಾವಿದರ ಮಾಸಾಶನಕ್ಕೆ ‌ಆಗ್ರಹ; ಭಜನೆ ಮಂದಿರವಾದ ‌ಡಿ.ಸಿ ಕಚೇರಿ ಆವರಣ

Published:
Updated:

ಬಳ್ಳಾರಿ: ನಗರದ ‌ಜಿಲ್ಲಾಧಿಕಾರಿ ಕಚೇರಿ ಆವರಣ ಸೋಮವಾರ ಮಧ್ಯಾಹ್ನ ಸಮಾರು ಒಂದು ‌ಗಂಟೆಗೂ‌ ಹೆಚ್ಚು ಕಾಲ ಭಜನೆ ಮಂದಿರವಾಗಿ ಮಾರ್ಪಟ್ಟಿತ್ತು.

ಮಾಸಾಶನ ನೀಡಬೇಕು ಎಂಬದೂ ಸೇರಿದಂತೆ ‌ವಿವಿಧ ಬೇಡಿಕೆಗಳನ್ನು ಈಡೇರಿಸಲು ‌ಆಗ್ರಹಿಸಿ‌ ಜಿಲ್ಲೆಯ ಸಾವಿರಾರು ಭಜನೆ ಕಲಾವಿದರು‌ ಭಜನೆ ಮಾಡುವ ಮೂಲಕ ತಮ್ಮ ಸಾಂಸ್ಕೃತಿಕ ಧರಣಿ ನಡೆಸಿದರು.

ಹತ್ತಾರು ಗುಂಪುಗಳಲ್ಲಿ ಕುಳಿತು ನಿರಂತರ ‌ಭಜನೆ‌ ನಡೆಸಿದ‌ ಪರಿಣಾಮವಾಗಿ‌ ಜಿಲ್ಲಾಧಿಕಾರಿ ಕಚೇರಿ ಆವರಣ ಭಜನೆ‌ ಚೌಡಿಕೆ, ತಬಲಾ, ತಾಳ- ಮೇಳದ  ಸದ್ದುಗಳಿ‌ದ ತುಂಬಿಹೋಗಿತ್ತು.

ಸಮುದಾಯ ಸಾಂಸ್ಕೃತಿಕ ಸಂಘಟನೆ, ಜಿಲ್ಲಾ ಭಜನೆ ತಂಡಗಳ ಒಕ್ಕೂಡದ ನೇತೃತ್ವದಲ್ಲಿ‌ ಕಲಾವಿದರು ಕಾಗೆ‌ ಪಾರ್ಕ್ನಿಂದ‌ ಮೆರವಣಿಗೆ‌ ನಡೆಸಿದರು.

ಭಜನೆ ತಂಡದ ಸದಸ್ಯರನ್ನು ಕಲಾವಿದರೆಂದು ಪರಿಗಣಿಸಬೇಕು. ಯುವ ‌ಕಲಾವಿದರಿಗೆ ಶಿಷ್ಯವೇತನದೊಂದಿಗೆ ತರಬೇತಿ‌ ನೀಡಬೇಕು. ನಲವತ್ತು‌ ವರ್ಷ‌ ಮೀರಿದವರಿಗೆ‌ ಮಾಸಾಶನ ನೀಡಬೇಕು. ಎಲ್ಲೆಡೆ ಸುಸಜ್ಜಿತ ಭಜನಾ ಭವನಗಳನ್ನು ‌ನಿರ್ಮಿಸಬೇಕು‌. ಭಜನಾ ತಂಡಗಳ ಸರ್ವೆ ನಡೆಸಬೇಕು. ಪ್ರತಿ ತಂಡಕ್ಕೂ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳನ್ನು ನೀಡಬೇಕು.

ನಿವೇಶನ ರಹಿತರಿಗೆ‌ ನಿವೇಶನ ನೀಡಬೇಕು. ಭೂರಹಿತರಿಗೆ ತಲಾ ಎರಡು ಎಕರೆ ಜಮೀನು ನೀಡಬೇಕು ಎಂದು ಜಿಲ್ಲಾ ಭಜನಾ ಕಲಾವಿದರ‌ ಸಂಚಾಲನಾ ಸಮಿತಿ ಪ್ರಮುಖರಾದ ಎ.ಕರುಣಾನಿಧಿ ಮತ್ತು ಎಂ.ಜಂಬಯ್ಯನಾಯ್ಕ ಆಗ್ರಹಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !