ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

7
ಸಾರಿಗೆ ಸಂಸ್ಥೆ ನೌಕರರ ಧರಣಿ

ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Deccan Herald

ಬಳ್ಳಾರಿ: ‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಮಹಮ್ಮದ್ ಫೈಜ್‌ ಅವರ ದುರಾಡಳಿತದ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ಸಿಬ್ಬಂದಿ ಮತ್ತು ಎಐಟಿಯುಸಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿದರು.

‘ವಿಭಾಗದಲ್ಲಿ ನಿಯಂತ್ರಣಾಧಿಕಾರಿಯ ಭ್ರಷ್ಟಾಚಾರ ಮಿತಿಮೀರಿದೆ. ಎಲ್ಲಾ ಶಾಖೆಗಳಲ್ಲಿ ತಮ್ಮದೇ ಗುಂಪು ಕಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ವರ್ಗಾವಣೆ ಬೆದರಿಕೆಯೊಡ್ಡಿ ಸಿಬ್ಬಂದಿಗಳನ್ನು ನಿಂದಿಸುತ್ತಾರೆ’ ಎಂದು ಮುಖಂಡ ಆದಿಮೂರ್ತಿ ಆರೋಪಿಸಿದರು.

‘ಅಧಿಕಾರಿಯ ದೌರ್ಜನ್ಯಕ್ಕೆ ಬೇಸತ್ತ ಡಿ ಗ್ರೂಪ್ ನೌಕರ ಸದಾಶಿವ ಈಡಿಗಾರ ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಇದುವರೆಗೂ ಎಫ್‌ಐಆರ್‌ ದಾಖಲಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿದರು.

ನೌಕರನ ಪತ್ನಿ ಗೀತಾಂಜಲಿ, ಮುಖಂಡರಾದ ಚೆನ್ನಪ್ಪ, ಕಾಂತಯ್ಯ ಗುತ್ತರಗಿ ಮಠ, ಶಿವಕುಮಾರ, ವಿರುಪಾಕ್ಷ, ಹನುಮಂತರೆಡ್ಡಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !