ಎರಡು ತಿಂಗಳ ವೇತನ ಪಾವತಿಗೆ ಕ್ರಮ

7
ಪೌರಕಾರ್ಮಿಕರ ದಿಢೀರ್ ಧರಣಿಗೆ ಬೆಚ್ಚಿದ ಪಾಲಿಕೆ

ಎರಡು ತಿಂಗಳ ವೇತನ ಪಾವತಿಗೆ ಕ್ರಮ

Published:
Updated:
Deccan Herald

ಬಳ್ಳಾರಿ: ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಪೌರಕಾರ್ಮಿಕರು ಮಂಗಳವಾರ ಮುಂಜಾನೆ ಕೆಲಸ ನಿಲ್ಲಿಸಿ ಪಾಲಿಕೆ ಮುಂದೆ ಧರಣಿ ಆರಂಭಿಸಿದ ಬೆಚ್ಚಿದ ಪಾಲಿಕೆಯು ಮುಖಂಡರೊಂದಿಗೆ ಸಭೆ ನಡೆಸಿ ಎರಡು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಂಡಿತು.

ಸಮಾನತೆ ಯೂನಿಯನ್‌–ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಬೆಳಕಾಗುವ ಮುನ್ನವೇ ಮುಷ್ಕರವನ್ನು ಆರಂಭಿಸಿದರು. ಅವರ ಸುತ್ತಮುತ್ತಲೂ ಕಸವಿತ್ತು.

ಸ್ವಚ್ಛತೆ ಕಾರ್ಯಕ್ಕೆ ದಿಢೀರನೆ ತಡೆ ಬಿದ್ದ ಕಾರಣ ಸ್ಥಳಕ್ಕೆ ಧಾವಿಸಿದ ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ, ಮೇಯರ್‌ ಆರ್‌.ಸುಶೀಲಾಬಾಯಿ, ಪಾಲಿಕೆ ಸದಸ್ಯ ಜಿ.ವೆಂಕಟಮರಣ, ಕಾರ್ಮಿಕರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಆದರೆ ಕಾರ್ಮಿಕರು ಒಪ್ಪದೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳಕ್ಕೆ ಬಂದ ಶಾಸಕ ಜಿ.ಸೋಮಶೇಖರ ರೆಡ್ಡಿಯವರೂ ಕಾರ್ಮಿಕರಿಗೆ ಸಾಂತ್ವನ ಹೇಳಿದರು.

ಸಭೆ: ನಂತರ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ರಾಮಚಂದ್ರ, ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಮ್ಮ, ನಾಗಲಕ್ಷ್ಮಿ, ಲಕ್ಷ್ಮಿದೇವಿ, ಕುಲ್ಲಾಯಮ್ಮ, ಅಮರನಾಥ್‌, ಕಾಳಿಪ್ರಸಾದ್‌ ಅವರೊಂದಿಗೆ ಸಭೆ ನಡೆಸಿದ ಆಯುಕ್ತರು ಮತ್ತು ಮೇಯರ್‌, ಎರಡು ತಿಂಗಳ ವೇತನದ ಬಿಲ್‌ ಅನ್ನು ಸಿದ್ಧಪಡಿಸಿ ಗುತ್ತಿಗೆದಾರರಿಗೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.

ಇನ್ನೊಂದು ತಿಂಗಳ ವೇತನವನ್ನು ನೇರವಾಗಿ ಕಾರ್ಮಿಕರಿಗೆ ವಿತರಿಸುವ ಭರವಸೆಯನ್ನು ನೀಡಿದರು. ನಂತರ ಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ತೆರಳಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !