ಬುಧವಾರ, ಸೆಪ್ಟೆಂಬರ್ 29, 2021
20 °C

ತುಂಗಭದ್ರಾ ಅಣೆಕಟ್ಟೆಯಲ್ಲಿ ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಅಣೆಕಟ್ಟೆಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಡೆಗಳಿಂದ ಜನ ಬಂದದ್ದರಿಂದ ದಿನವಿಡೀ ಜನಜಾತ್ರೆ ಕಂಡು ಬಂತು.

ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ ತೆರೆದು ನದಿಗೆ ನೀರು ಹರಿಸುತ್ತಿರುವ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಜನ ಬರುತ್ತಿದ್ದಾರೆ. ಅದರಲ್ಲೂ ರೈತರು ತುಂಗಭದ್ರೆ ತಾಯಿಗೆ ನಮಿಸಲು ಬರುತ್ತಿದ್ದಾರೆ.

ಎರಡನೇ ಶನಿವಾರ, ಭಾನುವಾರ ಹಾಗೂ ಬಕ್ರೀದ್‌ ನಿಮಿತ್ತ ಸೋಮವಾರ ರಜೆ ಇತ್ತು. ಸಾಲು ಸಾಲು ರಜೆ ಬಂದದ್ದರಿಂದ ಜನ ಅಣೆಕಟ್ಟೆ ಹಾಗೂ ಹಂಪಿ ಬಂದಿದ್ದರು. ಎಲ್ಲೆಡೆಯಿಂದ ಜನ ಬಂದದ್ದರಿಂದ ದಟ್ಟಣೆ ಕಂಡು ಬಂತು. ಅಣೆಕಟ್ಟೆಯ ಮುಂಭಾಗ, ಪಾರ್ಕಿಂಗ್‌ ಜಾಗ ವಾಹನಗಳು ಭರ್ತಿಯಾಗಿತ್ತು. ಜಲಾಶಯದ ಮುಖ್ಯ ಪ್ರವೇಶದ್ವಾರದಿಂದ ತಿರುಮಲ ಉದ್ಯಾನದ ವರೆಗೆ ಜನಜಂಗುಳಿ ಕಂಡು ಬಂತು.

ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲೆ ನಿಂತುಕೊಂಡು ಜನ ನೀರು ಹರಿದು ಹೋಗುತ್ತಿರುವುದನ್ನು ಕಣ್ತುಂಬಿಕೊಂಡರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು. ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಿರಲು ಪೊಲೀಸರು ದಿನವಿಡೀ ಪರದಾಟ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು