‘ಗಾಂಧೀಜಿ ವೀಕ್ಷಿಸಿದ್ದ ರಾಘವ ನಾಟಕ’

7
ತೆಲುಗು ಕಲಾವಿದರಿಗೆ ರಾಘವ ಪ್ರಶಸ್ತಿ ಪ್ರದಾನ

‘ಗಾಂಧೀಜಿ ವೀಕ್ಷಿಸಿದ್ದ ರಾಘವ ನಾಟಕ’

Published:
Updated:
Deccan Herald

ಬಳ್ಳಾರಿ: ‘ಬಳ್ಳಾರಿ ರಾಘವ ಅವರು ಅಭಿನಯಿಸಿದ್ದ ನಾಟಕವೊಂದನ್ನು ಮಹಾತ್ಮಾ ಗಾಂಧೀಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಕಲಾವಿದ ವಾಡ್ರೇವು ಸುಂದರರಾವ್‌ ಸ್ಮರಿಸಿದರು.

ನಗರದಲ್ಲಿ ಶುಕ್ರವಾರ ಸಂಜೆ ರಾಘವ ಮೆಮೋರಿಯಲ್‌ ಅಸೋಸಿಯೇಶನ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ರಾಘವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆದಿದ್ದ ನಾಟಕ ವೀಕ್ಷಣೆಗೆ ಬರಲು ಹತ್ತು ನಿಮಿಷ ಸಮಯ ನಿಗದಿ ಮಾಡಿದ್ದ ಗಾಂಧೀಜಿ, ಪೂರ್ಣ ನಾಟಕವನ್ನು ವೀಕ್ಷಿಸಿದ್ದರು’ ಎಂದರು.

‘ಕನ್ನಡ–ತೆಲುಗು ನಾಟಕ ಕ್ಷೇತ್ರದಲ್ಲಿ ಸಮಪ್ರಮಾಣದ ಪ್ರತಿಭೆ, ಪರಿಶ್ರಮವುಳ್ಳ ರಾಘವ ಅವರ ತೆಲುಗು ನಾಟಕಗಳು ಆಂಧ್ರ, ತೆಲಂಗಾಣದಲ್ಲಿ ಪ್ರಖ್ಯಾತಗೊಂಡಿವೆ’ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನಗರದ ಎ.ಲಕ್ಷ್ಮಿನಾರಾಯಣ ಮತ್ತು ಕೆ.ಕೃಷ್ಣಮೂರ್ತಿ ಅವರಿಗೆ ಗಣ್ಯರು ಪ್ರದಾನ ಮಾಡಿದರು.

ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಕೋಟೇಶ್ವರರಾವ್, ರಮೇಶ ಗೌಡ ಪಾಟೀಲ್, ರಾಮಾಂಜನೇಯುಲು, ಎನ್.ಬಸವರಾಜು, ಎಸ್.ಧನಂಜಯ, ಜೋಳದರಾಶಿ ಪಂಪಾಪತಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !