ಸೋಮವಾರ, ಸೆಪ್ಟೆಂಬರ್ 16, 2019
23 °C

ರಾಘವೇಂದ್ರರ ಮಧ್ಯಾರಾಧನೆ

Published:
Updated:
Prajavani

ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಯ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಮಧ್ಯಾರಾಧನೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಭಾನುವಾರ ಉತ್ತರಾರಾಧನೆ ಜೊತೆಗೆ ರಥೋತ್ಸವ ಜರುಗಲಿದೆ.

ಆ. 15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ನಗರದ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.

ಶನಿವಾರ ಹಸ್ತೋದಕ, ಸರ್ವ ಸೇವೆ, ವಿಶೇಷ ಫಲ ಪಂಚಾಮೃತ, ಸಾಮೂಹಿಕ ಪವಮಾನ ಹೋಮ, ಕನಕಮಹಾಪೂಜೆ, ಸರ್ವ ಸಮರ್ಪಣ ಸೇವೆ ಸೇರಿ ವಿವಿಧ ಧಾರ್ಮಿಕರ ಕಾರ್ಯಕ್ರಮಗಳು ನಡೆದವು. ಧರ್ಮಾಧಿಕಾರಿ ರಾಜಾ ಎಂ.ಬಿ ಪಂಬಣ್ಣ ತೀರ್ಥಾಚಾರ್ಯ ನೇತೃತ್ವ ವಹಿಸಿದ್ದರು.

Post Comments (+)