ಶನಿವಾರ, ಆಗಸ್ಟ್ 24, 2019
27 °C
ನಗರದಲ್ಲಿ ಪಾಲಿಕೆ ಆಯುಕ್ತೆ ತುಷಾರಮಣಿ ದಿಢೀರ್ ಕಾರ್ಯಾಚರಣೆ

 ₨ 15 ಸಾವಿರ ದಂಡ ಶುಲ್ಕ ವಸೂಲು

Published:
Updated:
Prajavani

ಬಳ್ಳಾರಿ: ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಗುರುವಾರ ನಗರದ ವಿವಿಧೆಡೆ ದಿಢೀರನೆ ದಾಳಿ ಕಾರ್ಯಾಚರಣೆ ನಡೆಸಿ ಎರಡು ಅಂಗಡಿ ಮಾಲೀಕರಿಗೆ₨ 15 ಸಾವಿರ ದಂಡ ಶುಲ್ಕ ವಿಧಿಸಿದರು. 

ನಗರದ ಸಣ್ಣ ಮಾರ್ಕೆಟ್ ಬಳಿ ಪ್ರಿಯಾ ಮಾರ್ಕೆಟಿಂಗ್ ಅಂಗಡಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ₨ 10ಸಾವಿರ ದಂಡ ಶುಲ್ಕ ವಿಧಿಸಿದರು. ಜೈ ಭವಾನಿ ಪ್ಲಾಸ್ಟಿಕ್ ಅಂಗಡಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ₨ 5 ಸಾವಿರ ದಂಡ ಶುಲ್ಕ ವಿಧಿಸಿದರು.

ನಂತರ ಮಾತನಾಡಿದ ಅವರು, ‘ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವುದನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗುವುದು. ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಕುರಿತು ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು’ ಎಂದು ತಿಳಿಸಿದರು. 

Post Comments (+)