ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಬಿರುಸಿನ ಮಳೆ

Last Updated 8 ಅಕ್ಟೋಬರ್ 2019, 11:21 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ, ಸೋಮವಾರ ಬೆಳಗಿನ ಜಾವ ಬಿರುಸಿನ ಮಳೆಯಾಗಿದೆ.

ಭಾನುವಾರ ರಾತ್ರಿ ಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಯಿತು. ಮಧ್ಯದಲ್ಲಿ ಬಿಡುವು ಕೊಟ್ಟ ಮಳೆ ಸೋಮವಾರ ಬೆಳಗಿನ ಜಾವ ಮತ್ತೆ ಸುರಿಯಲು ಆರಂಭಿಸಿತು. ನಸುಕಿನ ಜಾವ 5.30ರ ಸುಮಾರಿಗೆ ಆರಂಭಗೊಂಡ ಮಳೆ ಬೆಳಿಗ್ಗೆ 9.30ರ ವರೆಗೆ ನಿರಂತರವಾಗಿ ಸುರಿಯಿತು.

ಆಯುಧ ಪೂಜೆ ಹಬ್ಬದ ಸಿದ್ಧತೆಯಲ್ಲಿದ್ದ ಜನರಿಗೆ ಮಳೆ ತೊಡಕಾಯಿತು. ಕೆಲವರು ಮಳೆ ಲೆಕ್ಕಿಸದೆ ಹೂ, ಬಾಳೆದಿಂಡು ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಕಂಡು ಬಂತು. ಹತ್ತು ಗಂಟೆ ಬಳಿಕ ಬಿಸಿಲು ಬಂದದ್ದರಿಂದ ಹಬ್ಬಕ್ಕೆ ಎದುರಾಗಿದ್ದ ತೊಡಕು ದೂರವಾಯಿತು.

ಬಿರುಸಿನ ಮಳೆಯಿಂದ ಚಿತ್ತವಾಡ್ಗಿ, ಚಪ್ಪರದಹಳ್ಳಿ, ರಾಣಿಪೇಟೆ, ಶಿರಸಿನಕಲ್ಲು ಬಡಾವಣೆಗಳಲ್ಲಿ ಮೊಳಕಾಲುದ್ದ ನೀರು ಸಂಗ್ರಹಗೊಂಡಿತು. ಕೆಲಹೊತ್ತು ವಾಹನ ಸಂಚಾರಕ್ಕೆ ತೊಡಕಾಯಿತು.

ತಾಲ್ಲೂಕಿನ ಕಮಲಾಪುರ, ಹಂಪಿ, ಸೀತಾರಾಮ ತಾಂಡಾ, ಕಡ್ಡಿರಾಂಪುರ, ಹೊಸೂರು, ಧರ್ಮದಗುಡ್ಡ, ವಡ್ಡರಹಳ್ಳಿ, ಧರ್ಮಸಾಗರ, ಪಾಪಿನಾಯಕನಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT