ಶನಿವಾರ, ಜುಲೈ 31, 2021
22 °C

ಬಳ್ಳಾರಿ | 93ಕ್ಕೆ ಏರಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೊರೊನಾ ಸೋಂಕಿತ ಜಿಂದಾಲ್ ನೌಕರರೊಂದಿಗೆ ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ 20 ಮಂದಿ ಹಾಗೂ ಇತರ ಪ್ರದೇಶಗಳ ಮೂವರು ಸೇರಿ 23 ಮಂದಿಗೆ ಬುಧವಾರ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಮೂವರು ಮಹಿಳೆಯರಿದ್ದಾರೆ.
ಇಲ್ಲಿವರೆಗೆ 94 ಮಂದಿಗೆ ಸೋಂಕು ತಗುಲಿದಂತಾಗಿದೆ. ಮಂಗಳವಾರ ಸೋಂಕಿತ ಸಂಖ್ಯೆ 71 ಇತ್ತು.

ಜಿಂದಾಲ್ನ ಸಾಮಾನ್ಯ ನಿರ್ವಹಣಾ ವಿಭಾಗದಲ್ಲಿರುವವರಿಗೇ ಸೋಂಕು ತಗುಲುತ್ತಿರುವುದರಿಂದ ಅಲ್ಲಿನ ಶೇ 95 ಮಂದಿಗೆ ಐದು ದಿನ ರಜೆ ನೀಡಲಾಗಿದೆ. ಶೇ 5 ರಷ್ಟು ಮಂದಿಗೆ ಮಾತ್ರ ಕೆಲಸಕ್ಕೆ‌ ಬರುವಂತೆ ಜಿಂದಾಲ್ ಸೂಚಿಸಿದೆ.‌ ಜಿಲ್ಲಾಡಳಿತದ ಸೂಚನೆ ಮೇರೆಗೆ ಈ‌ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ತಿಳಿಸಿದ್ದಾರೆ.

23 ಮಂದಿಯ ಪೈಕಿ ಉಳಿದ ಮೂವರಲ್ಲಿ ಒಬ್ಬರು ಸಿರುಗುಪ್ಪ ಪಟ್ಟಣದ ಫೀವರ್ ಕ್ಲಿನಿಕ್ ನಲ್ಲಿ ತಪಾಸಣೆಗೆ ಬಂದಾಗ ಸೋಂಕು ದೃಢಪಟ್ಟಿತು. ಇನ್ನಿಬ್ಬರು ಮಹಾರಾಷ್ಟ್ರದಿಂದ ನಗರಕ್ಕೆ ವಾಪಸಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು