ರಾಣಿ ಸಂಯುಕ್ತಾ ಬಿರುಸಿನ ಪ್ರಚಾರ

ಶುಕ್ರವಾರ, ಏಪ್ರಿಲ್ 19, 2019
23 °C

ರಾಣಿ ಸಂಯುಕ್ತಾ ಬಿರುಸಿನ ಪ್ರಚಾರ

Published:
Updated:
Prajavani

ಹೊಸಪೇಟೆ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಅವರು ಸೋಮವಾರ ನಗರದಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.

ಟಿ.ಬಿ. ಡ್ಯಾಂ ಬಡಾವಣೆ, ನಿಶಾನಿ ಕ್ಯಾಂಪಿನಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ, ಪಕ್ಷದ ಕರಪತ್ರಗಳನ್ನು ಮತದಾರರಿಗೆ ಹಂಚಿ, ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಅವರನ್ನು ಬೆಂಬಲಿಸುವಂತೆ ರಾಣಿ ಸಂಯುಕ್ತಾ ಮನವಿ ಮಾಡಿದರು.

ಅವರೊಂದಿಗೆ ನೂರಾರು ಕಾರ್ಯಕರ್ತರು ಇದ್ದರು. ಭಾನುವಾರ ರಾತ್ರಿ ಇಲ್ಲಿನ ಚಿತ್ರಕೇರಿಯಲ್ಲಿ ನೂರಾರು ಮಹಿಳೆಯರೊಂದಿಗೆ ಪ್ರಚಾರ ಕೈಗೊಂಡಿದ್ದರು. ಚಕ್ಕಡಿಯಲ್ಲಿ ಬಂದು ಮತಯಾಚಿಸಿದರು. ಸ್ಥಳೀಯ ಮಹಿಳೆಯರು ಆರತಿ ಬೆಳಗಿ ರಾಣಿ ಸಂಯುಕ್ತಾ ಅವರನ್ನು ಸ್ವಾಗತಿಸಿದರು.

ಮುಖಂಡರಾದ ಜಂಬಾನಹಳ್ಳಿ ವಸಂತ, ಹನುಮಂತಪ್ಪ, ದೇವರಮನಿ ಶ್ರೀನಿವಾಸ್‌, ಗೋವಿಂದರಾಜ, ಯೋಗಲಕ್ಷ್ಮಿ, ಭಾರತಿ ಬಸವನಗೌಡ, ಪ್ರಿಯಾಂಕ ಜೈನ್‌, ರಂಗಮ್ಮ, ಪದ್ಮಾವತಿ, ಸುಜಾತ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !